ಕೇಶ ವಿನ್ಯಾಸ ಬದಲಿಸಿದ ಹಾರ್ದಿಕ್ ಪಾಂಡ್ಯ
ಮುಂಬೈ: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಕೇಶವಿನ್ಯಾಸ ಮಾಡಿಸಿಕೊಂಡು ಫೋಟೊ ಶೇರ್ ಮಾಡಿಕೊಂಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ಪಾಂಡ್ಯ, ಇದೇ ತಿಂಗಳ 28ರಂದು ಆರಂಭವಾಗುತ್ತಿರುವ ಪುರುಷರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ದುಬೈಗೆ ತಲುಪಿದ್ದಾರೆ. ವರದಿಗಳ ಪ್ರಕಾರ, ಟೂರ್ನಿಗೆ ಮುಂದಿನ ವಾರದಿಂದ ತರಬೇತಿ ಆರಂಭವಾಗಲಿದೆ.
ಕಂದು ಮಿಶ್ರಿತ ಮರಳಿನ ಬಣ್ಣದ ಸ್ಯಾಂಡಿ ಬ್ಲಾಂಡ್ ಕೇಶವಿನ್ಯಾಸ ಮಾಡಿಸಿರುವ ಪಾಂಡ್ಯಾ, ಸುತ್ತಲೂ ಟ್ರಿಮ್ ಮಾಡಿಸಿಕೊಂಡಿದ್ದಾರೆ. ಪಾಂಡ್ಯ ಅವರ ಕೂದಲಿನ ಬಣ್ಣಕ್ಕೆ ನೆಟ್ಟಿಗರು ಮಾರುಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಶೈಲಿಯಲ್ಲಿ ಫೋಟೊ ಹಂಚಿಕೊಂಡು ‘ನ್ಯೂ ಮಿ’ ಎಂದು ಬರೆದುಕೊಂಡಿದ್ದಾರೆ.
ಹೊಸ ಹೇರ್‌ಸ್ಟೈಲ್ ಮಾಡಿಸಿಕೊಂಡಿರುವ ಪಾಂಡ್ಯ ನೋಡಿ ಹಲವರು ಬೆನ್ ಸ್ಟೋಕ್ಸ್ ಮತ್ತು ನಿಕೋಲಸ್ ಪೂರನ್ ಅವರಿಗೆ ಹೋಲಿಕೆ ಮಾಡಿದ್ದಾರೆ.
ಸ್ಯಾಂಡಿ ಬ್ಲಾಂಡ್ ಕೇಶವಿನ್ಯಾಸ ಎಂದರೆ ಕೂದಲನ್ನು ಥೇಟ್ ಮರಳಿನ ಬಣ್ಣಕ್ಕೆ ಕಲರಿಂಗ್ ಮಾಡಿಸುವುದು. ಈ ಸ್ಟೈಲ್ ಸಾಮಾನ್ಯವಾಗಿ ಎಲ್ಲಾ ರೀತಿಯ ಚರ್ಮದ ಬಣ್ಣದವರಿಗೂ ಒಪ್ಪುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.