ಮಹಿಕಾ ಶರ್ಮಾ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ
ಚಿತ್ರ: manav.manglani
ಭಾರತ ಕ್ರಿಕೆಟ್ ತಂಡದ ತಾರಾ ಆಲ್‌ರೌಂಡರ್ ಮೈದಾನಲ್ಲಿ ಅಷ್ಟೇ ಅಲ್ಲ, ಮೈದಾನದ ಹೊರಗೂ ಸದಾ ಸುದ್ದಿಯಲ್ಲಿರುವ ಕ್ರಿಕೆಟಿಗ. ಅವರು ಕಳೆದ ವರ್ಷ ನತಾಶಾ ಸ್ಟಾಂಕೋವಿಕ್ ಜೊತೆ ವಿಚ್ಛೇದನ ಪಡೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಇತ್ತೀಚೆಗೆ ಅವರು ಮಹೀಕಾ ಶರ್ಮಾ ಜೊತೆ ಸಂಬಂಧದಲ್ಲಿರುವುದಾಗಿಯೂ ದೃಢಪಡಿಸಿದ್ದಾರೆ.
ಇದೀಗ ಅವರು ತಮ್ಮ ಗೆಳತಿ ಮಹೀಕಾ ಶರ್ಮಾ ಅವರ ಚಿತ್ರಗಳನ್ನು ಬೀದಿ ಬದಿ ಛಾಯಾಗ್ರಾಹಕರು (ಪಾಪರಾಜಿಗಳು) ಕೆಟ್ಟ ದೃಷ್ಟಿಕೋನದಲ್ಲಿ ಕ್ಲಿಕ್ಕಿಸಲು ಮುಂದಾಗಿರುವುದರ ವಿರುದ್ಧ ಕಿಡಿಕಾರಿದ್ದಾರೆ.
‘ಸಾರ್ವಜನಿಕ ಜೀವನದಲ್ಲಿರುವಾಗ ನಮ್ಮನ್ನು ಜನರು ಗಮನಿಸುತ್ತಿರುತ್ತಾರೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಪ್ರತಿಯೊಬ್ಬರ ಖಾಸಗಿತನವನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂಬುದನ್ನು ತಿಳಿದಿರಬೇಕು. ನಾನು ಹೇಗೆ ಬದುಕಬೇಕು ಎಂಬುದು ನಾನೇ ಆಯ್ಕೆ ಮಾಡಿಕೊಂಡ ಜೀವನದ ಭಾಗ. ಆದರೆ, ಇಂದು ನನ್ನ ಖಾಸಗಿ ಜೀವನದ ಗೆರೆಯನ್ನು ದಾಟಿ ಏನೋ ಸಂಭವಿಸಿದೆ’ ಎಂದು ಬರೆದುಕೊಂಡಿದ್ದಾರೆ.
‘ಮಹೀಕಾ ಅವರು ಬಾಂದ್ರಾ ರೆಸ್ಟೋರೆಂಟ್ ಒಂದರ ಮೆಟ್ಟಿಲುಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ಆಕೆಯನ್ನು ಕೆಟ್ಟದಾಗಿ ಕಾಣುವಂತೆ ಚೀತ್ರೀಕರಿಸಲು ಫೋಟೊಗ್ರಾಫರ್ ಮುಂದಾಗುತ್ತಾರೆ. ಅದು ಆಕೆಯ ಖಾಸಗೀತನದ ಉಲ್ಲಂಘನೆ. ಯಾವುದೇ ಮಹಿಳೆಯನ್ನು ಈ ರೀತಿ ತೋರಿಸುವುದು ಕೀಳು ಮನಸ್ಥಿತಿಯ ಭಾಗ’ ಎಂದು ಹಾರ್ದಿಕ್ ಪಾಂಡ್ಯ ಕಿಡಿಕಾರಿದ್ದಾರೆ.
‘ಇದು ಅವರು ಏನನ್ನು ಕ್ಲಿಕ್ ಮಾಡಿದ್ದಾರೆ ಎಂಬುದರ ಬಗ್ಗೆ ಮಾತ್ರವಲ್ಲ, ಬದಲಾಗಿ ಇದು ಮಹಿಳೆಯ ಖಾಸಗೀತನದ ಗೌರವದ ಕುರಿತಾಗಿದೆ. ಮಹಿಳೆಯರು ಘನತೆಗೆ ಅರ್ಹರು. ಪ್ರತಿಯೊಬ್ಬರೂ ಒಂದು ಮಿತಿಯನ್ನು ಹೊಂದಿರಬೇಕು’ ಎಂದು ಬರೆದಿದ್ದಾರೆ.
ಮುಂದುವರೆದು, ‘ಪ್ರತಿದಿನ ಕಷ್ಟಪಟ್ಟು ಕೆಲಸ ಮಾಡುವ ಮಾಧ್ಯಮ ಸಹೋದರರ ಉತ್ಸಾಹವನ್ನು ಗೌರವಿಸುತ್ತೇನೆ ಮತ್ತು ನಾನು ಯಾವಾಗಲೂ ಅವರಿಗೆ ಸಹಕರಿಸುತ್ತೇನೆ. ಆದರೆ, ನೀವು ಮತ್ತಷ್ಟು ಜಾಗರೂಕರಾಗಿರಿ ಎಂದು ನಾನು ವಿನಂತಿಸುತ್ತೇನೆ. ಎಲ್ಲವನ್ನೂ ಸೆರೆಹಿಡಿಯುವ, ಪ್ರತಿಯೊಂದು ಆ್ಯಂಗಲ್‌ನಿಂದ ಫೋಟೊ ಕ್ಲಿಕ್ಕಿಸುವ ಅಗತ್ಯವಿರುವುದಿಲ್ಲ. ಸ್ವಲ್ಪ ಮಾನವೀಯತೆ ಇಟ್ಟುಕೊಳ್ಳೋಣ ಧನ್ಯವಾದಗಳು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.