ADVERTISEMENT

ಟಿ20 ರ‍್ಯಾಂಕಿಂಗ್‌ | ಪಾಂಡ್ಯಗೆ ಅಗ್ರಸ್ಥಾನ: 3ನೇ ಸ್ಥಾನಕ್ಕೇರಿದ ತಿಲಕ್ ವರ್ಮಾ

ಪಿಟಿಐ
Published 20 ನವೆಂಬರ್ 2024, 16:04 IST
Last Updated 20 ನವೆಂಬರ್ 2024, 16:04 IST
   

ದುಬೈ: ಭಾರತದ  ಹಾರ್ದಿಕ್‌ ಪಾಂಡ್ಯ ಐಸಿಸಿ ಟಿ20 ರ‍್ಯಾಂಕಿಂಗ್‌ನ ಆಲ್‌ರೌಂಡರ್‌ಗಳ  ವಿಭಾಗದಲ್ಲಿ ‌ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ಬ್ಯಾಟರ್‌ಗಳ ವಿಭಾಗದಲ್ಲಿ ತಿಲಕ್‌ ವರ್ಮಾ ಮೂರನೇ ಸ್ಥಾನಕ್ಕೇರಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚಿನ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಾರ್ದಿಕ್‌ ಪಾಂಡ್ಯ ಅವರು ಇಂಗ್ಲೆಂಡ್‌ ಆಟಗಾರ ಲಿಯಾಮ್‌ ಲಿವಿಂಗ್‌ಸ್ಟೋನ್‌ ಮತ್ತು ನೇಪಾಳದ ದೀಪೆಂದ್ರ ಸಿಂಗ್‌ ಐರಿ ಅವರನ್ನು ಹಿಂದೆಹಾಕಿ ಮೊದಲ ಸ್ಥಾನಕ್ಕೇರಿದರು.

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಎರಡನೇ ಬಾರಿ ಟಿ20 ಆಲ್‌ರೌಂಡರ್‌ಗಳ ವಿಭಾಗದಲ್ಲಿ ನಂ.1 ಆಟಗಾರರಾಗಿ ಹೊರಹೊಮ್ಮಿದ್ದಾರೆ. 

ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಶತಕ ಹೊಡೆದಿದ್ದ ತಿಲಕ್‌ ವರ್ಮಾ, ಕ್ರಮಾಂಕಪಟ್ಟಿಯಲ್ಲಿ 69 ಸ್ಥಾನಗಳ ಭಾರಿ ಬಡ್ತಿಪಡೆದು ಮೂರನೇ ಸ್ಥಾನಕ್ಕೇರಿದ್ದಾರೆ. ಸೂರ್ಯಕುಮಾರ್ ಯಾದವ್ ನಾಲ್ಕನೆ ಸ್ಥಾನದಲ್ಲಿದ್ದಾರೆ.  ಸಂಜು ಸ್ಯಾಮ್ಸನ್ 17 ಸ್ಥಾನಗಳಷ್ಟು ಬಡ್ತಿ ಪಡೆದು 22ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.