ADVERTISEMENT

ಏಕದಿನ, ಟಿ20: ಇಂಗ್ಲೆಂಡ್‌ ತಂಡಕ್ಕೆ ಬ್ರೂಕ್‌ ಸಾರಥಿ

ಪಿಟಿಐ
Published 7 ಏಪ್ರಿಲ್ 2025, 15:44 IST
Last Updated 7 ಏಪ್ರಿಲ್ 2025, 15:44 IST
ಹ್ಯಾರಿ ಬ್ರೂಕ್‌
ಹ್ಯಾರಿ ಬ್ರೂಕ್‌   

ಲಂಡನ್‌: ಹ್ಯಾರಿ ಬ್ರೂಕ್‌ ಅವರನ್ನು ಇಂಗ್ಲೆಂಡ್‌ ಏಕದಿನ ಮತ್ತು ಟಿ20 ಕ್ರಿಕೆಟ್‌ ತಂಡಗಳ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಕಳೆದ ತಿಂಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಜೋಸ್ ಬಟ್ಲರ್ ನಾಯಕತ್ವ ಸ್ಥಾನವನ್ನು ತ್ಯಜಿಸಿದ್ದರು. ಆ ಸ್ಥಾನಕ್ಕೆ 26 ವರ್ಷ ವಯಸ್ಸಿನ ಬ್ಯಾಟರ್‌ ಬ್ರೂಕ್‌ ಅವರನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸೋಮವಾರ ನೇಮಿಸಿದೆ.

2022ರ ಜನವರಿಯಲ್ಲಿ ಟಿ20 ಪಂದ್ಯದ ಮೂಲಕ ಇಂಗ್ಲೆಂಡ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದ ಬ್ರೂಕ್‌, ಸೀಮಿತ ಓವರ್‌ಗಳ ಮಾದರಿಯಲ್ಲಿ ಗಮನ ಸೆಳೆಯುವ ಆಟ ಪ್ರದರ್ಶಿಸಿದ್ದಾರೆ. ಅಲ್ಲದೆ. ಕಳೆದ ವರ್ಷದಿಂದ ಏಕದಿನ ಮತ್ತು ಟಿ20 ಮಾದರಿಯಲ್ಲಿ ಉಪನಾಯಕನಾಗಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಬಟ್ಲರ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರು.

ADVERTISEMENT

ಇಂಗ್ಲೆಂಡ್‌ ತಂಡದ ಪರ ಬ್ರೂಕ್‌ ಈತನಕ 26 ಏಕದಿನ ಪಂದ್ಯಗಳನ್ನು ಆಡಿದ್ದು, 34ರ ಸರಾಸರಿಯಲ್ಲಿ 816 ರನ್‌ಗಳನ್ನು ಗಳಿಸಿದ್ದಾರೆ. 24 ಟೆಸ್ಟ್‌ ಮತ್ತು 44 ಟಿ20 ಪಂದ್ಯಗಳನ್ನು ಆಡಿದ್ದಾರೆ. 2022ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು.

ಹ್ಯಾರಿ ಬ್ರೂಕ್‌

ಕಳೆದ ವರ್ಷ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದ ಬ್ರೂಕ್‌ ಅವರು ನಂತರ ಇಂಗ್ಲೆಂಡ್ ತಂಡದ ಪರ ಗಮನ ಕೇಂದ್ರೀಕರಿಸಲು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಿಂದ ಹಿಂದೆ ಸರಿದಿದ್ದರು. ಹೀಗಾಗಿ, ಐಪಿಎಲ್‌ನಲ್ಲಿ ಅವರಿಗೆ ಎರಡು ವರ್ಷಗಳ ನಿಷೇಧ ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.