ADVERTISEMENT

ವಿರಾಟ್‌ ವರ್ತನೆ ನನಗೆ ಇಷ್ಟ, ಆದರೆ...: ಕೊಹ್ಲಿ ಬಗ್ಗೆ ಏನು ಹೇಳಿದ್ದಾರೆ ಗಂಗೂಲಿ?

ಐಎಎನ್ಎಸ್
Published 19 ಡಿಸೆಂಬರ್ 2021, 4:05 IST
Last Updated 19 ಡಿಸೆಂಬರ್ 2021, 4:05 IST
2018ರಲ್ಲಿ ನಡೆದಿದ್ದ ಕೋಲ್ಕತ್ತದಲ್ಲಿ ನಡೆದಿದ್ದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಕೊಹ್ಲಿಗೆ ಸಿಹಿ ತಿನಿಸುತ್ತಿರುವ ಗಂಗೂಲಿ (ಪಿಟಿಐ)
2018ರಲ್ಲಿ ನಡೆದಿದ್ದ ಕೋಲ್ಕತ್ತದಲ್ಲಿ ನಡೆದಿದ್ದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಕೊಹ್ಲಿಗೆ ಸಿಹಿ ತಿನಿಸುತ್ತಿರುವ ಗಂಗೂಲಿ (ಪಿಟಿಐ)   

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಶನಿವಾರ ವಿರಾಟ್ ಕೊಹ್ಲಿ ಅವರ ವರ್ತನೆಯ ಕುರಿತು. ವಿರಾಟ್‌ ಕೊಹ್ಲಿ ಅವರ ವರ್ತನೆಯನ್ನು ನಾನು ಇಷ್ಟಪಡುತ್ತೇನೆ. ಆದರೆ ತುಂಬಾ ಜಗಳವಾಡುತ್ತಾರೆ,’ ಎಂದು ಅವರು ತಿಳಿಸಿದ್ದಾರೆ.

ಟಿ20, ಏಕದಿನ ಕ್ರಿಕೆಟ್‌ನ ನಾಯಕತ್ವದ ವಿಚಾರವಾಗಿ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಶೀಥಲ ಸಮರ ನಡೆಯುತ್ತಿದೆ.

ಈ ಮಧ್ಯೆ ಗಂಗೂಲಿ ಶನಿವಾರ ಕೊಹ್ಲಿ ವರ್ತನೆಯ ಬಗ್ಗೆ ಮಾತನಾಡಿದ್ದಾರೆ. ‘ನೀವು ಯಾವ ಆಟಗಾರನ ವರ್ತನೆಯನ್ನು ಹೆಚ್ಚು ಇಷ್ಟಪಡುತ್ತೀರಿ’ ಎಂದು ಗುರುಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಯನ್ನು ಕೇಳಲಾಗಿದೆ.

ADVERTISEMENT

ಇದಕ್ಕೆ ಉತ್ತರಿಸಿರುವ ಗಂಗೂಲಿ, ನನಗೆ ವಿರಾಟ್‌ ಕೊಹ್ಲಿ ಅವರ ವರ್ತನೆ ಇಷ್ಟವಾಗುತ್ತದೆ. ಆದರೆ, ಅವರು ಹೆಚ್ಚು ಜಗಳವಾಡುತ್ತಾರೆ ಎಂದು ಹೇಳಿದ್ದಾರೆ.

ನೀವು ಜೀವನದಲ್ಲಿ ಒತ್ತಡವನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಗಂಗೂಲಿ ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ‘ಜೀವನದಲ್ಲಿ ಯಾವುದೇ ಒತ್ತಡವಿಲ್ಲ. ಹೆಂಡತಿ ಮತ್ತು ಗೆಳತಿಯಿಂದ ಮಾತ್ರ ಒತ್ತಡ ಉಂಟಾಗುತ್ತದೆ,’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.