ADVERTISEMENT

ಮಹಿಳಾ ಟಿ20 ವಿಶ್ವಕಪ್‌: ಲಕ್ಷ್ಮಿ, ವೃಂದಾ, ಜನನಿ ನೇಮಕ

ಮಹಿಳಾ ಟಿ20 ವಿಶ್ವಕಪ್‌: ಅಂಪೈರ್‌, ರೆಫರಿ ಎಲ್ಲ ಸ್ಥಾನ ಮಹಿಳೆಯರಿಗೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 21:44 IST
Last Updated 27 ಜನವರಿ 2023, 21:44 IST
   

ದುಬೈ: ದಕ್ಷಿಣ ಆಫ್ರಿಕಾದಲ್ಲಿ ನಿಗದಿಯಾಗಿರುವ ಮಹಿಳಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ರೆಫರಿ, ಅಂಪೈರ್‌ಗಳ ಎಲ್ಲ ಸ್ಥಾನಗಳಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು (ಐಸಿಸಿ) ಮಹಿಳೆಯರನ್ನು ನೇಮಿಸಿದೆ.

ಎಲ್ಲ ಸ್ಥಾನಗಳಿಗೆ ಮಹಿಳೆಯನ್ನು ನೇಮಿಸಿದ್ದು ವಿಶ್ವ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಯಾಗಿದ್ದು, ಭಾರತದ ಜಿ.ಎಸ್‌. ಲಕ್ಷ್ಮಿ, ವೃಂದಾ ರಾಠಿ ಮತ್ತು ಜನನಿ ನಾರಾಯಣನ್‌ ಅವರು ಸ್ಥಾನ ಪಡೆದಿದ್ದಾರೆ.

ಟೂರ್ನಿಗೆ ಒಟ್ಟು ಮೂರು ಮಂದಿ ರೆಫರಿಗಳು, 10 ಅಂಪೈರ್‌ಗಳು ನೇಮಕಗೊಂಡಿದ್ದು, ಕ್ರಿಕೆಟ್‌ನಲ್ಲಿ ಮಹಿಳೆಯರ ಒಳಗೊಳ್ಳುವಿಕೆಯನ್ನು ಹೆಚ್ಚಿಸುವ ಐಸಿಸಿಯ ಮಹತ್ವಾಕಾಂಕ್ಷೆಯ ಭಾಗವಾಗಿದೆ.

ADVERTISEMENT

ವಿಶ್ವಕಪ್ ಟೂರ್ನಿಗೆ ನೇಮಕಗೊಂಡವರು: ಪಂದ್ಯ ರೆಫರಿಗಳು: ಜಿ.ಎಸ್‌.ಲಕ್ಷ್ಮಿ (ಭಾರತ), ಶಾಂಡ್ರೆ ಫ್ರಿಟ್ಜ್‌ (ದಕ್ಷಿಣ ಆಫ್ರಿಕಾ), ಮಿಚೆಲ್‌ ಪೆರೆರಾ (ಶ್ರೀಲಂಕಾ).

ಅಂಪೈರ್‌ಗಳು: ವೃಂದಾ ರಾಠಿ, ಜನನಿ ನಾರಾಯಣನ್‌ (ಭಾರತ), ಸ್ಯೂ ರೆಡ್‌ಫರ್ನ್‌, ಅನ್ನಾ ಹ್ಯಾರಿಸ್‌ (ಇಂಗ್ಲೆಂಡ್‌), ಇಲೊಸ್‌ ಶೆರಿಡನ್‌, ಕ್ಲೇರ್ ಪೊಲೊಸಾಕ್‌ (ಆಸ್ಟ್ರೇಲಿಯಾ), ಜಾಕ್ವೆಲಿನ್ ವಿಲಿಯಮ್ಸ್ (ವೆಸ್ಟ್ ಇಂಡೀಸ್‌), ಕಿಮ್ ಕಾಟನ್‌ (ನ್ಯೂಜಿಲೆಂಡ್‌), ಲಾರೆನ್‌ ಅಗೆನ್‌ಬಗ್‌ (ದಕ್ಷಿಣ ಆಫ್ರಿಕಾ), ನಿರ್ಮಲಾ ಪೆರೆರಾ (ಶ್ರೀಲಂಕಾ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.