ADVERTISEMENT

ICCಯಲ್ಲಿ ಭಾರತದವರ ಪಾರುಪತ್ಯ ಮುಂದುವರಿಕೆ: ಹೊಸ ಸಿಇಒ ಆಗಿ ಸಂಜೋಗ್ ಗುಪ್ತಾ ನೇಮಕ

ಪಿಟಿಐ
Published 7 ಜುಲೈ 2025, 14:18 IST
Last Updated 7 ಜುಲೈ 2025, 14:18 IST
<div class="paragraphs"><p>ಸಂಜೋಗ್ ಗುಪ್ತಾ</p></div>

ಸಂಜೋಗ್ ಗುಪ್ತಾ

   

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ (ಐಸಿಸಿ) ಹೊಸ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಸಂಜೋಗ್ ಗುಪ್ತಾ ನೇಮಕವಾಗಿದ್ದಾರೆ.

ಇಷ್ಟು ದಿನ ಆಸ್ಟ್ರೇಲಿಯಾದ ಜೆಫ್ ಅಲ್ಲಾರ್ಡೈಸ್ ಅವರು ಐಸಿಸಿ ಸಿಇಒ ಆಗಿದ್ದರು. ಗುಪ್ತಾ 7 ನೇ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ADVERTISEMENT

ವಿಶೇಷ ಎಂದರೆ ಈ ಹುದ್ದೆಗೆ ಜಗತ್ತಿನ ವಿವಿಧ ಕಡೆಯಿಂದ 2500 ಅನುಭವಿಗಳ ಅರ್ಜಿಗಳನ್ನು ಐಸಿಸಿ ಸ್ವೀಕರಿಸಿತ್ತು. 12 ಜನ ಫೈನಲ್ ಲಿಸ್ಟ್‌ಗೆ ಅರ್ಹತೆ ಹೊಂದಿದ್ದರು. ಅದರಲ್ಲಿ ಮುಂಬೈ ಮೂಲದ ಸಂಜೋಗ್ ಗುಪ್ತಾ ಯಶಸ್ವಿಯಾದರು ಎಂದು ಐಸಿಸಿ ತಿಳಿಸಿದೆ.

ಗುಪ್ತಾ ಅವರು ಈ ಮೊದಲು ಜಿಯೊ ಸ್ಟಾರ್‌ನ Sports & Live Experiences ವಿಭಾಗದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ನೇಮಕದಿಂದ ಐಸಿಸಿ ಹಾಗೂ ಕ್ರಿಕೆಟ್‌ ಇನ್ನೂ ಉತ್ತಮವಾಗಿ ಬೆಳೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

ಮೇನಲ್ಲಿ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.