ADVERTISEMENT

T20 WC | PAK vs ENG Final: ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್‌ಗೆ ಬೇಕು 138 ರನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2022, 9:53 IST
Last Updated 13 ನವೆಂಬರ್ 2022, 9:53 IST
ಸ್ಯಾಮ್ ಕರನ್ ಬೌಲಿಂಗ್ ಭಂಗಿ
ಸ್ಯಾಮ್ ಕರನ್ ಬೌಲಿಂಗ್ ಭಂಗಿ   

ಮೆಲ್ಬರ್ನ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನ ತಂಡವನ್ನು 137 ರನ್‌ಗಳಿಗೆ ನಿಯಂತ್ರಿಸುವಲ್ಲಿಇಂಗ್ಲೆಂಡ್ ಯಶಸ್ವಿಯಾಗಿದೆ.

ಈ ಮೂಲಕ ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್‌ಗೆ 138 ರನ್‌ಗಳ ಅಗತ್ಯವಿದೆ. ಈ ಸಾಧಾರಣ ಮೊತ್ತವನ್ನು ಡಿಫೆಂಡ್ ಮಾಡಲು ಪಾಕಿಸ್ತಾನಕ್ಕೆ ಸಾಧ್ಯವೇ ಎಂಬುದು ಕುತೂಹಲವೆನಿಸಿದೆ.

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್‌ಗಳು ನಿಖರ ಬೌಲಿಂಗ್ ಮಾಡುವ ಮೂಲಕ ಪಾಕ್ ಓಟಕ್ಕೆ ಕಡಿವಾಣ ಹಾಕಿದರು.

ADVERTISEMENT

ಪಾಕಿಸ್ತಾನ ಪರ ಶಾನ್ ಮಸೂದ್ ಗರಿಷ್ಠ 38 ರನ್ ಗಳಿಸಿದರು. ನಾಯಕ ಬಾಬರ್ ಆಜಂ 32 ಹಾಗೂ ಮೊಹಮ್ಮದ್ ರಿಜ್ವಾನ್ 15 ರನ್ ಗಳಿಸಿದರು.

ಇನ್ನುಳಿದಂತೆ ಶದಾಬ್ ಖಾನ್ (20), ಮೊಹಮ್ಮದ್ ಹ್ಯಾರಿಸ್ (8), ಮೊಹಮ್ಮದ್ ನವಾಜ್ (5), ಮೊಹಮ್ಮದ್ ವಾಸೀಂ ಜೂ. (4), ಶಾಹೀನ್ ಆಫ್ರಿದಿ (5*), ಹ್ಯಾರಿಸ್ ರವೂಫ್ (1*) ರನ್ ಗಳಿಸಿದರು.

ಇಂಗ್ಲೆಂಡ್ ಪರ ಸ್ಯಾಮ್ ಕರನ್ ನಾಲ್ಕು ಓವರ್‌ಗಳಲ್ಲಿ 12 ರನ್ ಮಾತ್ರ ಬಿಟ್ಟುಕೊಟ್ಟಿದ್ದರಲ್ಲದೆ ಮೂರು ವಿಕೆಟ್ ಕಿತ್ತು ಮಿಂಚಿದರು. ಅದಿಲ್ ರಶೀದ್ ಹಾಗೂ ಕ್ರಿಸ್ ಜಾರ್ಡನ್ ತಲಾ ಎರಡು ವಿಕೆಟ್ ಗಳಿಸಿ ಪರಿಣಾಮಕಾರಿ ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.