ADVERTISEMENT

ICC T20I Rankings: ಸ್ಮೃತಿ ಮಂದಾನ 3ನೇ ಸ್ಥಾನಕ್ಕೆ ಬಡ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜುಲೈ 2025, 9:41 IST
Last Updated 1 ಜುಲೈ 2025, 9:41 IST
<div class="paragraphs"><p>ಸ್ಮೃತಿ ಮಂದಾನ</p></div>

ಸ್ಮೃತಿ ಮಂದಾನ

   

(ರಾಯಿಟರ್ಸ್ ಚಿತ್ರ)

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಮಹಿಳಾ ಟ್ವೆಂಟಿ-20 ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಉಪನಾಯಕಿ ಸ್ಮೃತಿ ಮಂದಾನ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ADVERTISEMENT

ಒಂದು ಸ್ಥಾನ ಏರಿಕೆ ಕಂಡಿರುವ ಮಂದಾನ, ಒಟ್ಟು 771 ರೇಟಿಂಗ್ ಅಂಕಗಳನ್ನು ಗಳಿಸಿದ್ದಾರೆ.

ಆಸ್ಟ್ರೇಲಿಯಾದ ಬೆತ್ ಮೂನಿ ಅಗ್ರಸ್ಥಾನದಲ್ಲಿದ್ದು (794), ವೆಸ್ಟ್‌ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ (774) ಎರಡನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ತಹ್ಲಿಯಾ ಮೆಕ್‌ಗ್ರಾಥ್ ಹಿಂದಿಕ್ಕಿರುವ ಮಂದಾನ ಅಗ್ರ ಮೂರರಲ್ಲಿ ಸ್ಥಾನ ಪಡೆದಿದ್ದಾರೆ. ತಹ್ಲಿಯಾ ಮೆಕ್‌ಗ್ರಾಥ್ 757 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಸ್ಮೃತಿ ಅಗ್ರ 10ರ ಪಟ್ಟಿಯಲ್ಲಿರುವ ಏಕಮಾತ್ರ ಭಾರತೀಯ ಆಟಗಾರ್ತಿ ಆಗಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ 12 (622) ಹಾಗೂ ಶೆಫಾಲಿ ವರ್ಮಾ 13 (615) ಮತ್ತು ಜೆಮಿಮಾ ರಾಡ್ರಿಗ್ರಸ್ 14ನೇ (612) ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯಲ್ಲಿ ಸ್ಮೃತಿ ಶತಕದ ಸಾಧನೆ ಮಾಡಿದ್ದರು. ಇದು ಟಿ20 ಕ್ರಿಕೆಟ್‌ನಲ್ಲಿ ಮಂದಾನ ಗಳಿಸಿದ ಮೊದಲ ಶತಕವಾಗಿತ್ತು.

ಇನ್ನು ಮಹಿಳಾ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮಂದಾನ ಈಗಾಗಲೇ ಅಗ್ರಸ್ಥಾನದಲ್ಲಿದ್ದಾರೆ.

ಸ್ಮೃತಿ ಮಂದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.