
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತ ವನಿತೆಯರ ತಂಡ ಮೊದಲ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡು ಚಾರಿತ್ರಿಕ ಸಾಧನೆ ಮೆರೆಯಿತು
ಪಿಟಿಐ ಚಿತ್ರ
ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ಅವರ ಆಲ್‌ರೌಂಡ್ ಆಟದ ಬಲದಿಂದ ಭಾರತವು 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ವನಿತೆಯರ ಎದುರು ಜಯಭೇರಿ ಬಾರಿಸಿತು.
2005 ಮತ್ತು 2017ರ ಟೂರ್ನಿಗಳಲ್ಲಿ ಫೈನಲ್‌ನಲ್ಲಿ ಎಡವಿದ್ದ ಭಾರತ ತಂಡ ಈ ಬಾರಿ ಗುರಿ ತಪ್ಪಲಿಲ್ಲ.
ಐಸಿಸಿ ಅಧ್ಯಕ್ಷ ಜಯ್ ಶಾ ಅವರಿಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟ್ರೋಫಿ ಪಡೆದುಕೊಂಡರು
ಕಪ್ ಗೆದ್ದ ಸಂಭ್ರಮದಲ್ಲಿ ಹೆಜ್ಜೆ ಹಾಕಿದ ನಾಯಕಿ ಹರ್ಮನ್‌ಪ್ರೀತ್ ಕೌರ್
ವಿಶ್ವಕಪ್ ಟ್ರೋಫಿ ಹಿಡಿದು ಸಂಭ್ರಮಿಸಿದ ಭಾರತದ ವನಿತೆಯರು
ಟ್ರೋಫಿಯೊಂದಿಗೆ ಭಾರತ ತಂಡ
ತ್ರಿವರ್ಣ ಧ್ವಜದೊಂದಿಗೆ ಭಾರತ ತಂಢದ ಕೋಚ್ ಅಮೋಲ್ ಮುಜುಂದಾರ್
ಭಾರತದ ಕೋಚ್ ಅಮೋಲ್ ಮುಜುಂದಾರ್ ಅವರು ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಊರಿದರು.
ಹರ್ಮನ್‌ಪ್ರೀತ್ ಕೌರ್ ತಂಡ ವಿಶ್ವಕಪ್ ಟ್ರೋಫಿ ಗೆಲ್ಲುತ್ತಿದ್ದಂತೆ ದೇಶದಾದ್ಯಂತ ಸಂಭ್ರಮ ಮುಗಿಲುಮುಟ್ಟಿತ್ತು
ಜನರು ಪಟಾಕಿ ಹಚ್ಚಿ ಭಾರತದ ವನಿತೆಯರು ಮೊದಲ ಬಾರಿ ವಿಶ್ವಕಪ್ ಗೆದ್ದಿರುವುದನ್ನು ಸಂಭ್ರಮಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.