ಯುವರಾಜ್ ಸಿಂಗ್ ಬ್ಯಾಟಿಂಗ್
–ಐಎಂಎಲ್ ಎಕ್ಸ್ ಚಿತ್ರ
ರಾಯಪುರ್: ಯುವರಾಜ್ ಸಿಂಗ್ (59; 30ಎ, 4x1, 6x7) ಅವರ ಅರ್ಧಶತಕ ಮತ್ತು ಶಹಬಾಜ್ ನದೀಂ (15ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಇಂಡಿಯಾ ಮಾಸ್ಟರ್ಸ್ ತಂಡವು ಗುರುವಾರ ಇಂಟರನ್ಯಾಷನಲ್ ಮಾಸ್ಟರ್ಸ್ ಲೀಗ್‌ನ ಸೆಮಿಫೈನಲ್‌ನಲ್ಲಿ 94 ರನ್‌ಗಳಿಂದ ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ತಂಡವು ಸಚಿನ್ ತೆಂಡೂಲ್ಕರ್ (42;30ಎ, 4x7) ಮತ್ತು ಯುವರಾಜ್ ಅವರ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 220 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 126 ರನ್‌ಗೆ ಆಲೌಟ್ ಆಯಿತು. ಶಹಬಾಜ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ವಿನಯಕುಮಾರ್ ಮತ್ತು ಇರ್ಫಾನ್ ಪಠಾಣ್ ತಲಾ ಎರಡು ವಿಕೆಟ್ ಪಡೆದರು.
ಮತ್ತೊಂದು ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಶುಕ್ರವಾರ ಸೆಣಸಲಿದ್ದು, ವಿಜೇತ ತಂಡವು ಭಾನುವಾರ ಇಂಡಿಯಾ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್: ಇಂಡಿಯಾ ಮಾಸ್ಟರ್ಸ್: 20 ಓವರ್‌ಗಳಲ್ಲಿ 7ಕ್ಕೆ 220 (ಸಚಿನ್ ತೆಂಡೂಲ್ಕರ್ 42, ಯುವರಾಜ್ ಸಿಂಗ್ 59, ಸ್ಟುವರ್ಟ್ ಬಿನ್ನಿ 36; ಝೇವಿಯರ್ ದೊಹಾರ್ತಿ 30ಕ್ಕೆ 2, ಡೇನಿಯಲ್ ಕ್ರಿಶ್ಚಿಯನ್ 40ಕ್ಕೆ 2). ಆಸ್ಟ್ರೇಲಿಯಾ ಮಾಸ್ಟರ್ಸ್: 18.1 ಓವರ್‌ಗಳಲ್ಲಿ 126 (ಬೆನ್ ಕಟಿಂಗ್ 39; ಶಹಬಾಜ್ ನದೀಂ 15ಕ್ಕೆ 4, ವಿನಯಕುಮಾರ್ 10ಕ್ಕೆ 2, ಇರ್ಫಾನ್ ಪಠಾಣ್ 31ಕ್ಕೆ 2. ಫಲಿತಾಂಶ: ಇಂಡಿಯಾ ಮಾಸ್ಟರ್ಸ್‌ಗೆ 94 ರನ್‌ಗಳ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.