ADVERTISEMENT

IND vs NZ: ಗಾಯದ ಸಮಸ್ಯೆ; ಮೈದಾನಕ್ಕಿಳಿಯದ ಮಯಂಕ್–ಗಿಲ್

ಐಎಎನ್ಎಸ್
Published 5 ಡಿಸೆಂಬರ್ 2021, 10:56 IST
Last Updated 5 ಡಿಸೆಂಬರ್ 2021, 10:56 IST
ಮಯಂಕ್ ಅಗರವಾಲ್ ಮತ್ತು ಶುಭಮನ್ ಗಿಲ್
ಮಯಂಕ್ ಅಗರವಾಲ್ ಮತ್ತು ಶುಭಮನ್ ಗಿಲ್   

ಮುಂಬೈ: ‘ಟೀಮ್‌ ಇಂಡಿಯಾದ ಆರಂಭಿಕ ಆಟಗಾರರಾದ ಮಯಂಕ್ ಅಗರವಾಲ್ ಮತ್ತು ಶುಭಮನ್ ಗಿಲ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರು ನ್ಯೂಜಿಲೆಂಡ್‌ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿಲ್ಲ’ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಮಯಾಂಕ್ ಅಗರವಾಲ್ ಅವರ ಬಲಗೈಗೆ ಪೆಟ್ಟಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಅವರು ಫೀಲ್ಡಿಂಗ್‌ ಮಾಡದಿರಲು ತೀರ್ಮಾನಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮಯಂಕ್‌, ಮೊದಲ ಇನ್ನಿಂಗ್ಸ್‌ನಲ್ಲಿ 150, ಎರಡನೇ ಇನ್ನಿಂಗ್ಸ್‌ನಲ್ಲಿ 62 ರನ್‌ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ADVERTISEMENT

ಇತ್ತ ಬಲಗೈ ಬೆರಳಿಗೆ ಗಾಯ ಮಾಡಿಕೊಂಡಿರುವ ಶುಭಮನ್‌ ಗಿಲ್‌ ಕೂಡ ಫೀಲ್ಡಿಂಗ್‌ ಮಾಡುತ್ತಿಲ್ಲ. ಗಾಯದ ಸಮಸ್ಯೆಯಿಂದಾಗಿ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಇನ್ನಿಂಗ್ಸ್ ಆರಂಭಿಸಿರಲಿಲ್ಲ. ಅವರ ಬದಲು ಅನುಭವಿ ಚೇತೇಶ್ವರ ಪೂಜಾರ, ಅಗರವಾಲ್‌ ಜೊತೆಗೆ ಬ್ಯಾಟಿಂಗ್‌ ಆರಂಭಿಸಿದ್ದರು. ಗಿಲ್‌ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು47 ರನ್‌ ಗಳಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿಯೂ ಚೆನ್ನಾಗಿ ಆಡಿದ್ದ ಅವರು ತಂಡಕ್ಕೆ 44 ರನ್ ಕೊಡುಗೆ ನೀಡಿದ್ದರು.

ಅಗರ್‌ವಾಲ್‌ – ಗಿಲ್‌ ಬದಲಿಗೆ ಸುರ್ಯಾಕುಮಾರ್‌ ಯಾದವ್‌ ಮತ್ತು ಕೆ.ಎಸ್‌.ಭರತ್‌ ಅವರು ಫೀಲ್ಡಿಂಗ್‌ ಮಾಡುತ್ತಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಗೆಲುವಿಗೆ 540 ರನ್‌ಗಳ ಬೃಹತ್ ಸವಾಲನ್ನು ಭಾರತ ಒಡ್ಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್‌ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 276 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತು.

ಸದ್ಯ ಬ್ಯಾಟಿಂಗ್ ಮುಂದುವರಿಸಿರುವ ನ್ಯೂಜಿಲೆಂಡ್ 28 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 87 ರನ್‌ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.