ADVERTISEMENT

IND vs AUS ಟೆಸ್ಟ್: ಭಾರತಕ್ಕೆ ಐತಿಹಾಸಿಕ ಗೆಲುವು, ಇಲ್ಲಿವೆ ಸ್ವಾರಸ್ಯಕರ ಸಂಗತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2021, 9:25 IST
Last Updated 19 ಜನವರಿ 2021, 9:25 IST
ಐತಿಹಾಸಿಕ ಜಯದ ಬಳಿಕ ಗ್ರೂಪ್ ಫೊಟೊಗೆ ಪೋಸ್ ಕೊಟ್ಟ ಆಟಗಾರರು: ಎಎಫ್‌ಪಿ ಚಿತ್ರ
ಐತಿಹಾಸಿಕ ಜಯದ ಬಳಿಕ ಗ್ರೂಪ್ ಫೊಟೊಗೆ ಪೋಸ್ ಕೊಟ್ಟ ಆಟಗಾರರು: ಎಎಫ್‌ಪಿ ಚಿತ್ರ   

ಬ್ರಿಸ್ಬೇನ್‌: ಇಲ್ಲಿನ ‘ಗಾಬಾ’ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತವು 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ತನ್ನದಾಗಿಸಿಕೊಂಡಿದೆ. ‘ಗಾಬಾ ಟೆಸ್ಟ್’ನಲ್ಲಿ ಭಾರತ ಜಯ ಗಳಿಸಿದ್ದು ಒಂದು ಸಾಧನೆಯಾದರೆ, ಆಸ್ಟ್ರೇಲಿಯಾ ಸೋಲನುಭವಿಸಿದ್ದೂ ವಿಶೇಷವೇ!

‘ಗಾಬಾ ಟೆಸ್ಟ್’ಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಹಲವು ಸ್ವಾರಸ್ಯಕರ ಸಂಗತಿಗಳನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದೆ.

ADVERTISEMENT

‘ಕಳೆದ ಬಾರಿ ಆಸ್ಟ್ರೇಲಿಯಾವು ಗಾಬಾದಲ್ಲಿ ಸೋಲನುಭವಿಸಿದ್ದು ಯಾವಾಗ...
* ಜಾರ್ಜ್‌ ಎಚ್.ಡಬ್ಲ್ಯು. ಬುಷ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿದ್ದಾಗ.
* ಜಾನ್ ಬೋವಿ ಅವರ ‘ಬ್ಯಾಡ್ ಮೆಡಿಸಿನ್’ ಹಾಡು ಜನಪ್ರಿಯಗೊಂಡಿದ್ದಾಗ.
* ವಿರಾಟ್ ಕೊಹ್ಲಿ ಅವರು ಜನಿಸಿ 16 ದಿನ ಆಗಿದ್ದಾಗ.
* ಸಚಿನ್ ತೆಂಡೂಲ್ಕರ್ ಅವರಿನ್ನೂ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಲು ಒಂದು ವರ್ಷ ಬಾಕಿ ಇದ್ದಾಗ’
ಎಂದು ಐಸಿಸಿ ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ‘ಗಾಬಾ’ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲನುಭವಿಸಿದ್ದು 1988ರಲ್ಲಿ. ಅದಾದ ಬಳಿಕ ಆಸ್ಟ್ರೇಲಿಯಾ ಅಲ್ಲಿ ಸೋಲನುಭವಿಸಿರುವುದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.