ADVERTISEMENT

IND vs ENG 1st Test: ತಂಡವನ್ನು ಹುರಿದುಂಬಿಸಿದ ಕ್ಯಾಪ್ಟನ್ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2021, 4:49 IST
Last Updated 6 ಫೆಬ್ರುವರಿ 2021, 4:49 IST
ವಿರಾಟ್ ಕೊಹ್ಲಿ, ವಾಷಿಂಗ್ಟನ್ ಸುಂದರ್
ವಿರಾಟ್ ಕೊಹ್ಲಿ, ವಾಷಿಂಗ್ಟನ್ ಸುಂದರ್   

ಚೆನ್ನೈ: ಎಂಎ ಚಿದಂಬರಂ ಮೈದಾನದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಆರಂಭಕ್ಕೂ ಮೊದಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಸಹ ಆಟಗಾರರನ್ನು ಹುರಿದುಂಬಿಸುವ ಮೂಲಕ ಗಮನ ಸೆಳೆದರು.

ಈ ವಿಡಿಯೊವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಮೊದಲ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ಮೂರು ವಿಕೆಟ್ ನಷ್ಟಕ್ಕೆ 263 ರನ್ ಪೇರಿಸಿತ್ತು. 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಜೋ ರೂಟ್, ಅಮೋಘ ಶತಕ ಬಾರಿಸಿದ್ದರು. ಇದರಿಂದಾಗಿ ತಂಡದ ಮನೋಬಲ ಕುಸಿಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಹ ಆಟಗಾರರಿಗೆ ಕ್ಯಾಪ್ಟನ್ ಕೊಹ್ಲಿ ಸ್ಫೂರ್ತಿ ತುಂಬಿದರು.

ಧೋನಿಹಾದಿಯಲ್ಲಿಕೊಹ್ಲಿ...
ಈ ಮೊದಲು ಮೊದಲ ದಿನದಾಟದಲ್ಲಿ ಸ್ನಾಯುಸೆಳೆತಕ್ಕೊಳಗಾಗಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಅವರಿಗೆ ನೆರವಾಗುವ ಮೂಲಕ ವಿರಾಟ್ ಕೊಹ್ಲಿ ಅವರು ಮಾಜಿ ಕೂಲ್ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರನ್ನು ಅನುಕರಿಸಿದ್ದರು.

ಹಿಂದೊಮ್ಮೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಸ್ನಾಯು ಸೆಳೆತಕ್ಕೊಳಗಾದ ಧೋನಿ ನೆರವು ಮಾಡಿದ್ದರು. ಈ ವಿಡಿಯೊಗಳ ಮಿಶ್ರಣವನ್ನು ಬಿಸಿಸಿಐ ಹಂಚಿಕೊಂಡಿದೆ. ಈಗ ಧೋನಿ ಅವರಂತೆ ವಿರಾಟ್ ಕೊಹ್ಲಿ ಸಹ ಕ್ರೀಡಾಸ್ಫೂರ್ತಿ ಮೆರೆದು ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ.

ಪಂತ್ ಮಾತುಗಾರಿಕೆ...
ಏತನ್ಮಧ್ಯೆ ಸ್ಟಂಪ್ ಮೈಕ್‌ನಲ್ಲಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಮಾತುಗಾರಿಕೆಯು ಸೆರೆಯಾಗಿದೆ. ತಮಾಷೆಭರಿತ ಪಂತ್ ಮಾತುಗಳು ಅಭಿಮಾನಿಗಳಲ್ಲೂ ಕುತೂಹಲಕೆರಳಿಸಿದೆ.

ವಾಷಿಂಗ್ಟನ್ ಸುಂದರ್ ದಾಳಿ ಮಾಡುತ್ತಿದ್ದ ಸಂದರ್ಭದಲ್ಲಿ 'ನನ್ನ ಹೆಸರು ವಾಷ್ಟಿಂಗನ್, ನಾನು ಡಿಸಿಗೆ ಹೋಗಲು ಬಯಸುತ್ತೇನೆ' ಎಂಬಪಂತ್ ಹೇಳಿಕೆಯು ವೈರಲ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.