ADVERTISEMENT

IND vs ENG 2nd Test: ಶತಕ ಸಿಡಿಸಿ ಸಂಭ್ರಮಿಸಿದ ರೋಹಿತ್‌ ಶರ್ಮಾ

ಏಜೆನ್ಸೀಸ್
Published 13 ಫೆಬ್ರುವರಿ 2021, 8:34 IST
Last Updated 13 ಫೆಬ್ರುವರಿ 2021, 8:34 IST
ರೋಹಿತ್‌ ಶರ್ಮಾ ಬ್ಯಾಟಿಂಗ್ ವೈಖರಿ –ಎಎಫ್‌ಪಿ ಚಿತ್ರ
ರೋಹಿತ್‌ ಶರ್ಮಾ ಬ್ಯಾಟಿಂಗ್ ವೈಖರಿ –ಎಎಫ್‌ಪಿ ಚಿತ್ರ   

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಟಾಸ್‌ ಗೆದ್ದು ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ರೋಹಿತ್‌ ಶರ್ಮಾ ಜೊತೆಗೂಡಿ ಬ್ಯಾಟಿಂಗ್‌ ಆರಂಭಿಸಿ ಶುಭಮನ್‌ ಗಿಲ್‌ ರನ್‌ ಖಾತೆ ತೆರೆಯುವ ಮುನ್ನವೇ ಒಲಿ ಸ್ಟೋನ್ಸ್‌ ಎಸೆದ ಎರಡನೇ ಓವರ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಚೇತೇಶ್ಚರ್ ಪೂಜಾರ 21 ರನ್ ಗಳಿಸಿ ಜ್ಯಾಕ್ ಲೀಚ್‌ಗೆ ಔಟಾದರು. ಬಳಿಕ ಕ್ರೀಸ್‌ ಬಂದ ನಾಯಕ ವಿರಾಟ್‌ ಕೊಹ್ಲಿ, ಮೋಯಿನ್ ಅಲಿ ಅವರ ಸ್ಪಿನ್ ಬಲೆಗೆ ಬಿದ್ದರು.

ADVERTISEMENT

ಸದ್ಯ ಭೋಜನ ವಿರಾಮದ ವೇಳೆ ಭಾರತ 51 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 185 ರನ್‌ ಗಳಿಸಿದೆ. ರೋಹಿತ್‌ ಶರ್ಮಾ ಔಟಾಗದೆ 129, ಅಜಿಂಕ್ಯ ರಹಾನೆ ಔಟಾಗದೆ 35 ರನ್‌ ಗಳಿಸಿದ್ದಾರೆ.

ಈ ಪಂದ್ಯದಲ್ಲಿ ಸ್ಥಾನ ಪಡೆದಿರುವ ಸ್ಪಿನ್ನರ್ ಅಕ್ಷರ್‌ ಪಟೇಲ್‌ ಅವರ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿದೆ.

ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ 227 ರನ್‌ಗಳಿಂದ ಭಾರತ ತಂಡ ಸೋತಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪ್ರವೇಶಿಸಬೇಕಾದರೆ ಭಾರತ ಕ್ರಿಕೆಟ್ ತಂಡವು ಕಠಿಣ ಹಾದಿಯಲ್ಲಿ ಸಾಗುವ ಒತ್ತಡದಲ್ಲಿದೆ.

ತಂಡಗಳು:‌ ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೆಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್‌ ಸಿರಾಜ್‌

ಇಂಗ್ಲೆಂಡ್: ಜೋ ರೂಟ್ (ನಾಯಕ), ರೋರಿ ಬರ್ನ್ಸ್, ಡಾಮ್ ಸಿಬ್ಲಿ, ಡ್ಯಾನ್ ಲಾರೆನ್ಸ್, ಬೆನ್ ಸ್ಟೋಕ್ಸ್‌, ಒಲಿ ಪೋಪ್, ಬೆನ್ ಫೋಕ್ಸ್‌ (ವಿಕೆಟ್‌ಕೀಪರ್), ಮೋಯಿನ್ ಅಲಿ, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಒಲಿ ಸ್ಟೋನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.