ರೋಹಿತ್ ಶರ್ಮಾ
ಪಿಟಿಐ ಚಿತ್ರ
ನಾಗಪುರ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ.
ಇಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, 47.4 ಓವರ್‌ಗಳಲ್ಲಿ 248 ರನ್ ಗಳಿಸಿ ಆಲೌಟ್ ಆಗಿದೆ.
ಪದಾರ್ಪಣೆ ಪಂದ್ಯವಾಡುತ್ತಿರುವ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಈ ಗುರಿ ಎದುರು ಇನಿಂಗ್ಸ್ ಆರಂಭಿಸಿದ ರೋಹಿತ್, 7 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಔಟಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರನ್ ಗಳಿಸಲು ಪರದಾಡುತ್ತಿರುವ ರೋಹಿತ್, ಕಳೆದ 16 ಇನಿಂಗ್ಸ್‌ಗಳಲ್ಲಿ ಗಳಿಸಿರುವುದು ಕೇವಲ 166 ರನ್ ಮಾತ್ರ. ಒಮ್ಮೆಯಷ್ಟೇ ಅರ್ಧಶತಕ ಗಳಿಸಿರುವ ಅವರು, ಎರಡಂಕಿ ದಾಟಿರುವುದು ಐದು ಸಲವಷ್ಟೇ. ಅವರ ಬ್ಯಾಟಿಂಗ್ ಸರಾಸರಿ 10.37!
ಇದೇ ತಿಂಗಳು ಪಾಕಿಸ್ತಾನದ ಆತಿಥ್ಯದಲ್ಲಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಸರಣಿ ಆರಂಭವಾಗಲಿದೆ. ಅದಕ್ಕೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ ಪಾಲಿಗೆ, ರೋಹಿತ್ ಅವರ ಪ್ರದರ್ಶನದ ಅಂಕಿ–ಅಂಶವು ತಲೆನೋವು ತಂದಿದೆ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಕಪ್ ಗೆದ್ದುಕೊಟ್ಟಿರುವ ರೋಹಿತ್, ಆ ಬಳಿಕ ಚುಟುಕು ಮಾದರಿಗೆ ವಿದಾಯ ಹೇಳಿದ್ದಾರೆ.
ಸದ್ಯ ಏಕದಿನ ಮತ್ತು ಟೆಸ್ಟ್‌ನಲ್ಲಷ್ಟೇ ಆಡುತ್ತಿರುವ ಅವರು, 2024ರಿಂದ ಈಚೆಗೆ 4 ಏಕದಿನ ಹಾಗೂ 14 ಟೆಸ್ಟ್ ಪಂದ್ಯಗಳಲ್ಲಿ (26 ಇನಿಂಗ್ಸ್‌ಗಳಲ್ಲಿ) ಬ್ಯಾಟ್ ಬೀಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 157 ರನ್ ಗಳಿಸಿದ್ದರೆ, ಟೆಸ್ಟ್‌ನಲ್ಲಿ ತಲಾ ಎರಡು ಶತಕ ಮತ್ತು ಅರ್ಧಶತಕ ಸಹಿತ 619 ರನ್ ಗಳಿಸಿದ್ದಾರೆ. ಈ ಸಂಖ್ಯೆ ಸಮಾಧಾನಕರವೇ ಆದರೂ, ಇತ್ತೀಚಿನ ಇನಿಂಗ್ಸ್‌ಗಳಲ್ಲಿ ರೋಹಿತ್ ಬ್ಯಾಟ್ ಸದ್ದು ಮಾಡಿಲ್ಲ.
ಕಳೆದ 16 ಇನಿಂಗ್ಸ್‌ಗಳಲ್ಲಿ ರೋಹಿತ್ ಗಳಿಸಿದ್ದು...
ಬಾಂಗ್ಲಾದೇಶ ಎದುರು 6 ರನ್ (ಟೆಸ್ಟ್)
ಬಾಂಗ್ಲಾದೇಶ ಎದುರು 5 ರನ್ (ಟೆಸ್ಟ್)
ಬಾಂಗ್ಲಾದೇಶ ಎದುರು 23 ರನ್ (ಟೆಸ್ಟ್)
ಬಾಂಗ್ಲಾದೇಶ ಎದುರು 8 ರನ್ (ಟೆಸ್ಟ್)
ನ್ಯೂಜಿಲೆಂಡ್ ಎದುರು 2 ರನ್ (ಟೆಸ್ಟ್)
ನ್ಯೂಜಿಲೆಂಡ್ ಎದುರು 52 ರನ್ (ಟೆಸ್ಟ್)
ನ್ಯೂಜಿಲೆಂಡ್ ಎದುರು 0 (ಟೆಸ್ಟ್)
ನ್ಯೂಜಿಲೆಂಡ್ ಎದುರು 8 ರನ್ (ಟೆಸ್ಟ್)
ನ್ಯೂಜಿಲೆಂಡ್ ಎದುರು 18 ರನ್ (ಟೆಸ್ಟ್)
ನ್ಯೂಜಿಲೆಂಡ್ ಎದುರು 11 ರನ್ (ಟೆಸ್ಟ್)
ಆಸ್ಟ್ರೇಲಿಯಾ ಎದುರು 3 ರನ್ (ಟೆಸ್ಟ್)
ಆಸ್ಟ್ರೇಲಿಯಾ ಎದುರು 6 ರನ್ (ಟೆಸ್ಟ್)
ಆಸ್ಟ್ರೇಲಿಯಾ ಎದುರು 10 ರನ್ (ಟೆಸ್ಟ್)
ಆಸ್ಟ್ರೇಲಿಯಾ ಎದುರು 3 ರನ್ (ಟೆಸ್ಟ್)
ಆಸ್ಟ್ರೇಲಿಯಾ ಎದುರು 9 ರನ್ (ಟೆಸ್ಟ್)
ಇಂಗ್ಲೆಂಡ್ ಎದುರು 2 ರನ್ (ಏಕದಿನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.