ADVERTISEMENT

IND vs NZ T20: ಅರ್ಶದೀಪ್, ಸಿರಾಜ್ ಉತ್ತಮ ಬೌಲಿಂಗ್; 160 ರನ್‌ಗೆ ಕಿವೀಸ್ ಆಲೌಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2022, 11:47 IST
Last Updated 22 ನವೆಂಬರ್ 2022, 11:47 IST
ವಿಕೆಟ್‌ ಪಡೆದ ಸಂಭ್ರಮದಲ್ಲಿ ಮೊಹಮ್ಮದ್ ಸಿರಾಜ್‌ ಮತ್ತು ಅರ್ಶದೀಪ್‌ ಸಿಂಗ್‌ (ಚಿತ್ರಕೃಪೆ: Twitter / @BCCI)
ವಿಕೆಟ್‌ ಪಡೆದ ಸಂಭ್ರಮದಲ್ಲಿ ಮೊಹಮ್ಮದ್ ಸಿರಾಜ್‌ ಮತ್ತು ಅರ್ಶದೀಪ್‌ ಸಿಂಗ್‌ (ಚಿತ್ರಕೃಪೆ: Twitter / @BCCI)   

ನೇಪಿಯರ್‌: ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಕ್ರಿಕೆಟ್‌ ಪಂದ್ಯದಲ್ಲಿನ್ಯೂಜಿಲೆಂಡ್‌ ತಂಡ 19.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 160ರನ್ ಕಲೆಹಾಕಿದೆ.

ಇಲ್ಲಿನ ಮೆಕ್‌ಲೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಟಿಮ್‌ ಸೌಥಿ ಬ್ಯಾಟಿಂಗ್‌ ಆಯ್ದುಕೊಂಡರು. ಅದರಂತೆ ಇನಿಂಗ್ಸ್‌ ಆರಂಭಿಸಿದ ಆತಿಥೇಯ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಡೆವೋನ್‌ ಕಾನ್ವೆ ಜೊತೆ ಬ್ಯಾಟಿಂಗ್‌ಗೆ ಬಂದ ಫಿನ್‌ ಅಲೆನ್‌ ಕೇವಲ 3 ರನ್‌ ಗಳಿಸಿ ಔಟಾದರು. ಬಳಿಕ ಬಂದ ಮಾರ್ಕ್‌ ಚಾಪ್‌ಮನ್‌ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಈ ಹಂತದಲ್ಲಿ ಜೊತೆಯಾದ ಕಾನ್ವೆ ಹಾಗೂ ಗ್ಲೆನ್‌ ಫಿಲಿಪ್ಸ್‌ 3ನೇ ವಿಕೆಟ್‌ ಪಾಲುದಾರಿಕೆಯಲ್ಲಿ 86 ರನ್ ಕಲೆಹಾಕಿದರು. ಕಾನ್ವೆ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 59 ರನ್ ಕಲೆಹಾಕಿದರೆ, ಬೀಸಾಟವಾಡಿದ ಫಿಲಿಪ್ಸ್‌ 33 ಎಸೆತಗಳಲ್ಲಿ5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 53 ರನ್‌ ಸಿಡಿಸಿದರು. 16.4 ಓವರ್‌ ಆಗುವಷ್ಟರಲ್ಲಿ ಈ ಇಬ್ಬರೂ ಔಟಾದರು. ಆಗ ತಂಡದ ಮೊತ್ತ 4 ವಿಕೆಟ್‌ಗೆ146 ರನ್ ಆಗಿತ್ತು.

ADVERTISEMENT

ಇದಾದ ಬಳಿಕ ಕಿವೀಸ್‌ ಕುಸಿತದ ಹಾದಿ ಹಿಡಿಯಿತು. ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದವೇಗಿ ಮೊಹಮ್ಮದ್ ಸಿರಾಜ್‌ ಮತ್ತು ಅರ್ಶದೀಪ್‌ ಸಿಂಗ್‌ ಈ ಹಂತದಲ್ಲಿಭಾರತಕ್ಕೆ ಮೇಲುಗೈ ತಂದುಕೊಟ್ಟರು. ಹೀಗಾಗಿ, ಆತಿಥೇಯ ತಂಡದ ಕೊನೇ 6 ವಿಕೆಟ್‌ಗಳು ಕೇವಲ 14 ರನ್‌ ಅಂತರದಲ್ಲಿ ಪತನಗೊಂಡವು.

ಅರ್ಶದೀಪ್‌ 4 ಓವರ್‌ಗಳಲ್ಲಿ 37 ರನ್‌ ನೀಡಿ 4 ವಿಕೆಟ್‌ ಉರುಳಿಸಿದರೆ, ಸಿರಾಜ್‌ 17 ರನ್ ನೀಡಿ4 ವಿಕೆಟ್ ಕಬಳಿಸಿದರು. ಹರ್ಷಲ್‌ ಪಟೇಲ್‌ ಒಂದು ವಿಕೆಟ್‌ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.