ADVERTISEMENT

T20 Cricket | ಭಾರತದ ವಿರುದ್ಧ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2023, 4:14 IST
Last Updated 2 ಫೆಬ್ರುವರಿ 2023, 4:14 IST
ಭಾರತ ತಂಡದ ಆಟಗಾರರು (ಪಿಟಿಐ ಚಿತ್ರ)
ಭಾರತ ತಂಡದ ಆಟಗಾರರು (ಪಿಟಿಐ ಚಿತ್ರ)   

ಅಹಮದಾಬಾದ್: ನ್ಯೂಜಿಲೆಂಡ್‌ ವಿರುದ್ಧ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ಪಂದ್ಯವನ್ನು ಭಾರತ ತಂಡ 168ರನ್‌ ಅಂತರದಿಂದ ಗೆದ್ದು ಬೀಗಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2–1 ಅಂತರದಿಂದ ಜಯಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಶುಭಮನ್‌ ಗಿಲ್‌ ಸಿಡಿಸಿದ ಅಮೋಘ ಶತಕದ (63 ಎಸೆತಗಳಲ್ಲಿ 126 ರನ್‌) ಬಲದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 234 ರನ್ ಗಳಿಸಿತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ಕೇವಲ 12.1 ಓವರ್‌ಗಳಲ್ಲಿ 66 ರನ್‌ಗಳಿಸಿ ಆಲೌಟ್‌ ಆಯಿತು.

ಇದು ಟಿ20 ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ತಂಡವೊಂದು ಗಳಿಸಿದ ಅತ್ಯಂತ ಕಡಿಮೆ ಮೊತ್ತ ಎನಿಸಿತು. ಇದಕ್ಕೂ ಮೊದಲು 2018ರಲ್ಲಿ ಐರ್ಲೆಂಡ್ ತಂಡವು 12.3 ಓವರ್‌ಗಳಲ್ಲಿ ಕೇವಲ 70 ರನ್‌ ಗಳಿಸಿ ಆಲೌಟ್‌ ಆಗಿದ್ದು ಹಿಂದಿನ ಕಳಪೆ ಮೊತ್ತವಾಗಿತ್ತು.

ADVERTISEMENT

2012ರಲ್ಲಿ ಇಂಗ್ಲೆಂಡ್‌ 80 ರನ್‌ಗಳಿಗೆ ಆಲೌಟ್‌ ಆಗಿತ್ತು. 2012ರಲ್ಲಿ ಯುಎಇ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 81 ರನ್‌ ಗಳಿಸಿದ್ದು ಹಾಗೂ 2016ರಲ್ಲಿ ಶ್ರೀಲಂಕಾ 82 ರನ್‌ಗಳಿಗೆ ಆಲೌಟ್‌ ಆಗಿದ್ದು, ಕ್ರಮವಾಗಿ ನಂತರದ ಕನಿಷ್ಠ ಮೊತ್ತಗಳಾಗಿವೆ.

ಒಟ್ಟಾರೆಯಾಗಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಕಳಪೆ ಮೊತ್ತಕ್ಕೆ ಕುಸಿದ ಅಪಖ್ಯಾತಿ ಇರುವುದು ಟರ್ಕಿ ತಂಡದ ಹೆಸರಲ್ಲಿ. ಈ ತಂಡ 2019ರಲ್ಲಿ ಚೆಕ್‌ ಗಣರಾಜ್ಯ ಬಳಗದ ವಿರುದ್ಧ 21 ರನ್‌ ಗಳಿಗೆ ಆಲೌಟ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.