ADVERTISEMENT

IND vs SA 2nd T20| ದಕ್ಷಿಣ ಆಫ್ರಿಕಾಕ್ಕೆ 149ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 15:43 IST
Last Updated 12 ಜೂನ್ 2022, 15:43 IST
ಶ್ರೇಯಸ್‌ ಅಯ್ಯರ್‌
ಶ್ರೇಯಸ್‌ ಅಯ್ಯರ್‌   

ಕಟಕ್ (ಒಡಿಶಾ): ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿರುವ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದೊಂದಿಗೆ 148ರನ್‌ ಗಳಿಸಿದೆ.

ಟಾಸ್‌ ಸೋತರು ಮೊದಲು ಬ್ಯಾಟ್‌ ಮಾಡುವ ಅವಕಾಶ ಗಿಟ್ಟಿಸಿಕೊಂಡ ಭಾರತ ಸಾಮಾನ್ಯ ಮೊತ್ತ ಗಳಿಸಿತು. ಆರಂಭಿಕರಾದ ಋತುರಾಜ್‌ ಗಾಯಕವಾಡ್‌ ನಿರಾಶೆ ಮೂಡಿಸಿದರು. ನಂತರ, ಇಶಾನ್‌ ಕಿಶನ್‌ (34) ಮತ್ತು ಶ್ರೇಯಸ್‌ ಅಯ್ಯರ್‌ (40) ಜೋಡಿ ತಾಳ್ಮೆಯ ಇನ್ನಿಂಗ್ಸ್‌ ಕಟ್ಟಿದರು.

ಬಳಿಕ ಬಂದ ರಿಷಭ್‌ ಪಂತ್‌ (5), ಹಾರ್ದಿಕ್‌ ಪಾಂಡ್ಯ (9), ಅಕ್ಷರ್‌ ಪಟೇಲ್‌ (10) ಅವರಿಂದ ಉತ್ತಮ ಆಟ ಮೂಡಿ ಬರಲಿಲ್ಲವಾದರೂ, ದಿನೇಶ್‌ ಕಾರ್ತಿಕ್‌ 30 ರನ್‌ ಸಿಡಿಸಿ ಗಮನ ಸೆಳೆದರು.

ADVERTISEMENT

ನಾಲ್ಕು ಓವರ್‌ ಮಾಡಿದರೂ, ಕೇವಲ 15ರನ್‌ ನೀಡಿದ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ 1 ವಿಕೆಟ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.