ವಿಕೆಟ್ ಪಡೆದ ಸಂಭ್ರಮದಲ್ಲಿ ಮೊಹಮ್ಮದ್ ಸಿರಾಜ್
ಕೇಪ್‌ಟೌನ್: ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಶಿಸ್ತಿನ ದಾಳಿ ಸಂಘಟಿಸಿದರು.
ಹರಿಣಗಳ ತಂಡದ ಬ್ಯಾಟರ್‌ಗಳ ಮೇಲೆ ಬಿರುಗಾಳಿಯಂತೆ ಎರಗಿದ ಅವರು, 9 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ ಪ್ರಮುಖ ಆರು ವಿಕೆಟ್‌ಗಳನ್ನು ಕಬಳಿಸಿದರು. ಹೀಗಾಗಿ ಆಫ್ರಿಕಾ ತಂಡ ಕೇವಲ 55 ರನ್ ಗಳಿಗೆ ಆಲೌಟ್ ಆಗಿದೆ.
ಸಿರಾಜ್ ವಿಕೆಟ್ ಪಡೆದ ಸಂದರ್ಭದ ಚಿತ್ರಗಳು ಇಲ್ಲಿವೆ.
ಸಿರಾಜ್ ಬೌಲಿಂಗ್ ವೈಖರಿ
ಮೊದಲ (ಏಡನ್ ಮರ್ಕರಂ) ವಿಕೆಟ್ ಪಡೆದಾಗ ವಿರಾಟ್ ಕೊಹ್ಲಿಯಿಂದ ಅಭಿನಂದನೆ
ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಔಟಾದಾಗ
ಸಿರಾಜ್ ಅವರು ಮೂರನೇ ವಿಕೆಟ್ ಉರುಳಿಸಿದಾಗ, ಹೀಗಿತ್ತು ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ
ನಾಲ್ಕನೇ (ಡೇವಿಡ್ ಬೆಡಿಂಗ್‌ಹ್ಯಾಮ್) ವಿಕೆಟ್ ಪಡೆದು ಜಿಗಿದು ಸಂಭ್ರಮಿಸಿದ್ದು
ವಿಕೆಟ್ ಪಡೆದ ಸಂಭ್ರಮದಲ್ಲಿ ಸಿರಾಜ್, ವಿರಾಟ್
ಐದನೇ (ಮಾರ್ಕೊ ಯಾನ್ಸೆನ್) ವಿಕೆಟ್ ಪಡೆದಾಗ ಸಿರಾಜ್ ಅವರತ್ತ ಓಡಿ ಬಂದ ರೋಹಿತ್ ಶರ್ಮಾ
ಐದು ವಿಕೆಟ್ ಗೊಂಚಲು ಸಾಧನೆಗೆ ಸಹ ಆಟಗಾರರಿಂದ ಅಭಿನಂದನೆ
ಆರನೇ (ಕೈಲ್ ವೆರೆಯನ್) ವಿಕೆಟ್ ಪಡೆದಾಗ ಸಂಭ್ರಮಿಸಿದ್ದು ಹೀಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.