ADVERTISEMENT

IND vs WI 1st ODI: ಭಾರತದ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವಿಂಡೀಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2022, 13:41 IST
Last Updated 22 ಜುಲೈ 2022, 13:41 IST
ಭಾರತ ತಂಡದ ನಾಯಕ ಶಿಖರ್‌ ಧವನ್‌ ಹಾಗೂ ವೆಸ್ಟ್‌ ಇಂಡೀಸ್‌ ತಂಡದ ನಾಯಕ ನಿಕೋಲಸ್‌ ಪೂರನ್‌
ಭಾರತ ತಂಡದ ನಾಯಕ ಶಿಖರ್‌ ಧವನ್‌ ಹಾಗೂ ವೆಸ್ಟ್‌ ಇಂಡೀಸ್‌ ತಂಡದ ನಾಯಕ ನಿಕೋಲಸ್‌ ಪೂರನ್‌   

ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್: ಭಾರತ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯವೆಸ್ಟ್‌ ಇಂಡೀಸ್‌ ತಂಡ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಇಲ್ಲಿನ ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಂಡಿದೆ.

ಅನುಭವಿ ಮತ್ತು ಪ್ರಮುಖ ಆಟಗಾರರು ವಿಶ್ರಾಂತಿ ಪಡೆದಿರುವ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಯುವ ಆಟಗಾರರನ್ನೊಳಗೊಂಡ ಶಿಖರ್‌ ಬಳಗಕ್ಕೆ ನಿಕೋಲಸ್ ಪೂರನ್ ನಾಯಕತ್ವದ ವಿಂಡೀಸ್ ಪಡೆಯು ಸವಾಲೊಡ್ಡಲಿದೆ.

ADVERTISEMENT

ನಾಯಕ ರೋಹಿತ್‌ ಶರ್ಮಾ,ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ.ಕೋವಿಡ್‌ ಕಾರಣದಿಂದಾಗಿ ವಿಂಡೀಸ್‌ ತಂಡದ ಅನುಭವಿ ಆಟಗಾರ ಜೇಸನ್‌ ಹೋಲ್ಡರ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಹನ್ನೊಂದರ ಬಳಗ
ಭಾರತ:
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್,ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್),ದೀಪಕ್ ಹೂಡಾ,ಅಕ್ಷರ್ ಪಟೇಲ್,ಶಾರ್ದೂಲ್ ಠಾಕೂರ್,ಪ್ರಸಿದ್ಧ ಕೃಷ್ಣ,ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್

ವೆಸ್ಟ್ ಇಂಡೀಸ್:ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ವಿಕೆಟ್‌ಕೀಪರ್),ಬ್ರೆಂಡನ್ ಕಿಂಗ್,ಶಾಮ್ರಾ ಬ್ರೂಕ್ಸ್,ಕೈಲ್ ಮೇಯರ್ಸ್,ರೋವ್ಮನ್ ಪೊವೆಲ್,ಅಕೀಲ್ ಹುಸೇನ್, ರೊಮಾರಿಯೊ ಶೆಫರ್ಡ್‌,ಅಲ್ಜರಿ ಜೋಸೆಫ್,ಗಡಕೇಶ್ ಮೋಟೀ,ಜೇಡನ್ ಸೀಲ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.