ADVERTISEMENT

ಹಮ್ಜಾ, ಕಾನರ್ ಬೀಸಾಟ; ಪಂತ್ ಬಳಗಕ್ಕೆ ಆಘಾತ: ದ.ಆಫ್ರಿಕಾ ಎ ತಂಡಕ್ಕೆ ಭರ್ಜರಿ ಜಯ

ಗಿರೀಶ ದೊಡ್ಡಮನಿ
Published 9 ನವೆಂಬರ್ 2025, 19:43 IST
Last Updated 9 ನವೆಂಬರ್ 2025, 19:43 IST
<div class="paragraphs"><p>ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐ ಸಿಒಇ ಕ್ರೀಡಾಂಗಣದಲ್ಲಿ ನಡೆದ ಚತುರ್ದಿನಗಳ ಪಂದ್ಯದಲ್ಲಿ ಭಾರತ ಎ ವಿರುದ್ಧ ಆಫ್ರಿಕಾ ಎ ತಂಡದ ಜೋರ್ಡಾನ್ ಹರ್ಮನ್ ಅರ್ಧಶತಕ ಗಳಿಸಿದರು</p></div>

ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐ ಸಿಒಇ ಕ್ರೀಡಾಂಗಣದಲ್ಲಿ ನಡೆದ ಚತುರ್ದಿನಗಳ ಪಂದ್ಯದಲ್ಲಿ ಭಾರತ ಎ ವಿರುದ್ಧ ಆಫ್ರಿಕಾ ಎ ತಂಡದ ಜೋರ್ಡಾನ್ ಹರ್ಮನ್ ಅರ್ಧಶತಕ ಗಳಿಸಿದರು

   

ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್

ಬೆಂಗಳೂರು: ರಿಷಭ್ ಪಂತ್ ನಾಯಕತ್ವದ ಭಾರತ ಎ ತಂಡಕ್ಕೆ ಭಾನುವಾರ ಮುಕ್ತಾಯವಾದ ‘ಟೆಸ್ಟ್‌’ನಲ್ಲಿ ದಕ್ಷಿಣ ಆಫ್ರಿಕಾ ಎ ತಂಡದ ಬ್ಯಾಟರ್‌ಗಳು ಆಘಾತ ನೀಡಿದರು. 

ADVERTISEMENT

417 ರನ್‌ಗಳ ಗುರಿಯನ್ನು ಶಿಸ್ತುಬದ್ಧ ಆಟದ ಮೂಲಕ ಸಾಧಿಸಿದ ಪ್ರವಾಸಿ ಬಳಗವು ಜಯದ ಕೇಕೆ ಹಾಕಿತು. ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೊನೆ ದಿನದಾಟದಲ್ಲಿ  ಕಾನರ್ ಎಸ್ತರಹುಝೇನ್ (ಔಟಾಗದೇ 52; 54ಎ, 4X8, 6X1) ಮತ್ತು ಟಿಯಾನ್ ವ್ಯಾನ್ ವುರೆನ್ (ಔಟಾಗದೇ 20) ಅವರ ಜೊತೆಯಾಟದಿಂದ ದಕ್ಷಿಣ ಆಫ್ರಿಕಾ ಎ ತಂಡ ಜಯಿಸಿತು. ಪಂದ್ಯವು  ಸಂಜೆ 5.24ಕ್ಕೆ ಮುಕ್ತಾಯವಾಯಿತು.  

ಪಂದ್ಯದ ಮೂರನೇ ದಿನವಾದ ಶನಿವಾರ ಭಾರತ ಎ ತಂಡವು ಎರಡನೇ ಇನಿಂಗ್ಸ್‌ನಲ್ಲಿ 7ವಿಕೆಟ್‌ಗಳಿಗೆ 382 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಒಟ್ಟು 416 ರನ್‌ಗಳ ಮುನ್ನಡೆ ಪಡೆದಿದ್ದ ರಿಷಭ್ ಪಂತ್ ಬಳಗವು ಅಪಾರ ಆತ್ಮವಿಶ್ವಾಸದಲ್ಲಿತ್ತು. ಗುರಿ ಬೆನ್ನಟ್ಟಿದ್ದ  24 ರನ್ ಗಳಿಸಿ ಪ್ರವಾಸಿ ಬಳಗವು ವಿಕೆಟ್ ನಷ್ಟವಿಲ್ಲದೇ 24 ರನ್ ಗಳಿಸಿ ದಿನದಾಟ ಮುಗಿಸಿತ್ತು.

ಕೊನೆಯ ದಿನದಾಟದಲ್ಲಿ ದಕ್ಷಿಣ ಅಫ್ರಿಕಾ ಎ ಮುಂದೆ 392 ರನ್‌ಗಳನ್ನು ಗಳಿಸಿ ಗೆಲ್ಲುವ ಅಥವಾ 90 ಓವರ್‌ಗಳನ್ನು ಆಡಿ ಡ್ರಾ ಮಾಡಿಕೊಳ್ಳುವ ಸವಾಲು ಇತ್ತು. ಇನ್ನೊಂದೆಡೆ ಒಂದೀಡಿ ದಿನದಲ್ಲಿ 10 ವಿಕೆಟ್ ಉರುಳಿಸಿ ಜಯದ ಸಂಭ್ರಮ ಆಚರಿಸುವ ಹುಮ್ಮಸ್ಸು ಪಂತ್ ಬಳಗಕ್ಕೆ ಇತ್ತು. 

ಆದರೆ ಜೋರ್ಡಾನ್ ಹರ್ಮನ್ ಮತ್ತು ಲೆಸೆಗೊ ಸೆನೊಕವಾನೆ ಭಾನುವಾರ ಬೆಳಿಗ್ಗೆ  ಮೊದಲ ವಿಕೆಟ್ ಜೊತೆಯಾಟದಲ್ಲಿ 156 ರನ್‌ ಸೇರಿಸುವ ಮೂಲಕ ತಮ್ಮ ತಂಡ ಗೆಲುವಿಗಾಗಿ ಆಡಲಿದೆ ಎಂಬ ಸಂದೇಶ ರವಾನಿಸಿದರು. ಇವರಿಬ್ಬರೂ 43 ಓವರ್‌ ಆಡಿದರು. ಈ ಅಡಿಪಾಯದ ನಂತರ ಬಂದ ಬ್ಯಾಟರ್‌ಗಳು ಗೆಲುವಿನ ಸೌಧ ಕಟ್ಟಿದರು.

ಜುಬೇರ್ ಹಮ್ಜಾ (77; 88ಎ, 4X9, 6X3) ಮತ್ತು ತೆಂಬಾ ಬವುಮಾ (59; 101ಎ, 4X7) ಮೂರನೇ ವಿಕೆಟ್ ಜೊತೆಯಾಟದಲ್ಲಿ 107 ರನ್ ಸೇರಿಸಿದರು. ಜುಬೇರ್ ಅವರು ಕುಲದೀಪ್ ಯಾದವ್ ಮತ್ತು ಹರ್ಷ ದುಬೆ ದಾಳಿಯಲ್ಲಿ ನುಚ್ಚುನೂರು ಮಾಡಿದರು. ನಾಯಕ ಏಕರ್ಮನ್ ಜೊತೆಗೆ ಬವುಮಾ 37 ರನ್ ಸೇರಿಸಿ, ಹೋರಾಟವನ್ನು ಜೀವಂತವಾಗಿಟ್ಟರು. ಆರನೇ ವಿಕೆಟ್ ಜೊತೆಯಾಟದಲ್ಲಿ ಕಾನರ್ ಮತ್ತು ಟಿಯಾನ್ 65 ರನ್‌ ಸೇರಿಸಿ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟರು. 

ಭಾರತ ಟೆಸ್ಟ್‌  ತಂಡದಲ್ಲಿ ಹಲವು ಪಂದ್ಯಗಳನ್ನು ಆಡಿರುವ ನಾಲ್ವರು ಅನುಭವಿ ಬೌಲರ್‌ಗಳ ತಂತ್ರಗಳು ಫಲಿಸಲಿಲ್ಲ.  

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

ಭಾರತ ಎ: 255. ದಕ್ಷಿಣ ಆಫ್ರಿಕಾ ಎ: 221; ಎರಡನೇ ಇನಿಂಗ್ಸ್: ಭಾರತ ಎ: 89.2 ಓವರ್‌ಗಳಲ್ಲಿ 7ಕ್ಕೆ382 ಡಿಕ್ಲೇರ್ಡ್

ದಕ್ಷಿಣ ಆಫ್ರಿಕಾ ಎ: 98 ಓವರ್‌ಗಳಲ್ಲಿ 5ಕ್ಕೆ417 (ಜೋರ್ಡಾನ್ ಹರ್ಮನ್ 91, ಲೆಸೆಗೊ ಸೆಂಕೊವಾನೆ 77, ಜುಬೇರ್ ಹಮ್ಜಾ 77, ತೆಂಬಾ ಬವುಮಾ 59, ಮಾರ್ಕೆಸ್ ಏಕರ್ಮನ್ 24, ಕಾನರ್ ಎಸ್ತಹುಝೇನ್ 52, ಟಿಯಾನ್ ವ್ಯಾನ್ ವುರೆನ್ ಔಟಾಗದೇ 20, ಪ್ರಸಿದ್ಧಕೃಷ್ಣ 49ಕ್ಕೆ2)

ಫಲಿತಾಂಶ: ದಕ್ಷಿಣ ಆಫ್ರಿಕಾ ಎ ತಂಡಕ್ಕೆ 5 ವಿಕೆಟ್ ಜಯ. 

ಆಫ್ರಿಕಾ ಎ ತಂಡದ ಜುಬೇರ್ ಹಮ್ಜಾ ಹಾಗೂ ತೆಂಬಾ ಬವುಮಾ ಜೊತೆಯಾಟದ ಓಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.