ADVERTISEMENT

INDU19 vs AUSU19 | ಆಸ್ಟ್ರೇಲಿಯಾ ಪ್ರವಾಸಕ್ಕೆ ಯುವ ತಂಡ ಪ್ರಕಟ

ಪಿಟಿಐ
Published 31 ಜುಲೈ 2025, 13:20 IST
Last Updated 31 ಜುಲೈ 2025, 13:20 IST
ಆಯುಷ್‌
ಆಯುಷ್‌   

ಮುಂಬೈ: ಇದೇ ವರ್ಷದ ಸೆಪ್ಟೆಂಬರ್‌– ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ 19 ವರ್ಷದೊಳಗಿನವರ ತಂಡ ಪ್ರಕಟಿಸಲಾಗಿದೆ. ನಾಯಕ ಆಯುಷ್‌ ಮ್ಹಾತ್ರೆ, ಆಕ್ರಮಣಕಾರಿ ಆಟಗಾರ ವೈಭವ್‌ ಸೂರ್ಯವಂಶಿ ಸೇರಿದಂತೆ ಇತ್ತೀಚೆಗೆ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದ ತಂಡದಲ್ಲಿದ್ದವರು ಸ್ಥಾನ ಉಳಿಸಿಕೊಂಡಿದ್ದಾರೆ.

ಭಾರತ ಮೂರು ಏಕದಿನ ಮತ್ತು ಎರಡು ನಾಲ್ಕು ದಿನಗಳ ಪಂದ್ಯ ಆಡಲಿದೆ.

ತಂಡ ಹೀಗಿದೆ: ಆಯುಷ್‌ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ವೇದಾಂತ್‌ ತ್ರಿವೇದಿ, ರಾಹುಲ್ ಕುಮಾರ್, ಅಭಿಗ್ಯಾನ್ ಕುಂದು (ವಿಕೆಟ್ ಕೀಪರ್‌, ಹರವಂಶ್‌ ಸಿಂಗ್‌ (ವಿಕೆಟ್ ಕೀಪರ್‌), ಆರ್.ಎಸ್‌.ಅಂಬರೀಶ್‌, ಕನಿಷ್ಕ್‌ ಚೌಹಾನ್‌, ನಮನ್ ಪುಷ್ಪಕ್‌, ಹೆನಿಲ್ ಪಟೇಲ್‌, ಡಿ.ದೀಪೇಶ್‌, ಕಿಶನ್ ಕುಮಾರ್, ಅನ್ಮೋಲ್‌ಜೀತ್ ಸಿಂಗ್‌, ಖಿಲಾನ್ ಪಟೇಲ್, ಉಧವ್‌ ಮೋಹನ್, ಅಮನ್ ಚೌಹಾನ್‌.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.