ADVERTISEMENT

ಭಾರತಕ್ಕೆ ಹಲವು ಆಯ್ಕೆಗಳಿವೆ:ಗಿಲ್ ಅಲಭ್ಯತೆ ಬಗ್ಗೆ ಜಾಂಟಿ ರೋಡ್ಸ್ ಹೇಳಿದ್ದು ಹೀಗೆ

ಪಿಟಿಐ
Published 21 ನವೆಂಬರ್ 2025, 10:48 IST
Last Updated 21 ನವೆಂಬರ್ 2025, 10:48 IST
   

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ನಾಯಕ ಶುಭಮನ್‌ ಗಿಲ್‌ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಆದರೆ, ನಾಯಕನ ಸ್ಥಾನ ತುಂಬುವ ಸಾಮರ್ಥ್ಯವು ಆ ತಂಡದಲ್ಲಿರುವ ಇತರ ಆಟಗಾರರಲ್ಲಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಕೊನೆಯ ಪಂದ್ಯವು ಶನಿವಾರ ಗುವಾಹಟಿಯಲ್ಲಿ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನವೇ ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ನಾಯಕ ಶುಭಮನ್‌ ಗಿಲ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. ರಿಷಭ್‌ ಪಂತ್‌ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತದ ಮೀಸಲು ಆಟಗಾರರ ಸಾಮರ್ಥ್ಯ ಉತ್ತಮವಾಗಿದೆ. ತಂಡದಲ್ಲಿ ಒಳ್ಳೆಯ ಆಟಗಾರರಿದ್ದಾರೆ. ಯಾರೂ ತಂಡದಲ್ಲಿರಬೇಕು ಮತ್ತು ಪಂದ್ಯದಿಂದ ಯಾರೂ ಹೊರಗಿರಬೇಕು ಎನ್ನುವುದನ್ನು ಆಯ್ಕೆ ಮಾಡುವುದೇ ಅವರಿಗೆ ಸಮಸ್ಯೆಯಾಗಿದೆ. ನಾಯಕನ ಸ್ಥಾನಕ್ಕೂ ಭಾರತ ತಂಡದಲ್ಲಿ ಉತ್ತಮ ಆಯ್ಕೆಗಳಿವೆ ಎಂದು ಜಾಂಟಿ ರೋಡ್ಸ್ ಹೇಳಿದ್ದಾರೆ.

ಭಾರತ ತಂಡವು ಧೋನಿ, ವಿರಾಟ್, ರೋಹಿತ್‌ ಸೇರಿದಂತೆ ಅನೇಕ ಪ್ರಮುಖ ಆಟಗಾರರನ್ನು ಕ್ರಿಕೆಟ್‌ಗೆ ನೀಡಿದೆ. ಹೊಸ ಪ್ರತಿಭೆಗಳು ಕೂಡ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿಂದ ಕಾಯುತ್ತಿದ್ದಾರೆ, ಸಿಕ್ಕ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಂಡರೆ ಮಾತ್ರ ತಂಡದಲ್ಲಿ ಮುಂದುವರೆಯಲು ಸಾಧ್ಯ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಮಹಿಳಾ ಏಕದಿನ ವಿಶ್ವಕಪ್‌ ವಿಜೇತರಾದ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಜಾಂಟಿ ರೋಡ್ಸ್, ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಕೂಡ ಜನಪ್ರಿಯವಾಗುತ್ತಿದೆ. ಪುರುಷರ ತಂಡಕ್ಕೆ ಸಿಕ್ಕ ಬೆಂಬಲವು ಮಹಿಳೆಯರಿಗೂ ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.