
ಕೋಲ್ಕತ್ತ: ಭಾರತ ತಂಡವು 15 ವರ್ಷಗಳ ಬಳಿಕ ತವರಿನ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿದೆ.
ಈಡನ್ ಗಾರ್ಡನ್‌ನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಭಾರತ ತಂಡವು 30 ರನ್‌ಗಳ ಸೋಲನುಭವಿಸಿದೆ.
ಬೌಲಿಂಗ್ ಪಿಚ್‌ನಲ್ಲಿ ರನ್‌ಗಳಿಸಲು ಪರದಾಡಿದ ಭಾರತದ ಬ್ಯಾಟರ್‌ಗಳು, ಎರಡನೇ ಇನಿಂಗ್ಸ್‌ನಲ್ಲಿ 124 ರನ್‌ಗಳ ಸುಲಭ ಗುರಿ ತಲುಪುವಲ್ಲಿ ವಿಫಲರಾದರು.
ಭಾರತ ತಂಡವು ಕೊನೆಯ ಬಾರಿ 2010ರಲ್ಲಿ ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸೋಲನುಭವಿಸಿತ್ತು.
ಕಡಿಮೆ ರನ್ ಗುರಿ ತಲುಪುವಲ್ಲಿ ವಿಫಲವಾದ ಭಾರತ: ಭಾರತ ತಂಡವು 124 ರನ್‌ಗಳ ಸುಲಭ ಗುರಿಯನ್ನು ತಲುಪುವಲ್ಲಿ ವಿಫಲವಾಯಿತು. ಇದು ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ತಂಡವು ಗುರಿಮುಟ್ಟುವಲ್ಲಿ ವಿಫಲವಾದ ಕಡಿಮೆ ರನ್‌ಗಳ ಗುರಿಯಾಗಿದೆ.
ಟೆಸ್ಟ್‌ನಲ್ಲಿ ಸೋಲಿಲ್ಲದ ನಾಯಕ ‘ಬವುಮಾ’: ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ತೆಂಬಾ ಬವುಮಾ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ 11 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಬವುಮಾ, 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಕೂಡ ಮುಡಿಗೇರಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.