ADVERTISEMENT

IND vs AUS: ಭಾರತ ಏಕದಿನ ತಂಡ 15ರಂದು ಪರ್ತ್‌ಗೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 13:24 IST
Last Updated 8 ಅಕ್ಟೋಬರ್ 2025, 13:24 IST
ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್
ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್   

ನವದೆಹಲಿ: ಭಾರತ ಏಕದಿನ ಕ್ರಿಕೆಟ್‌ ತಂಡವು ಅಕ್ಟೋಬರ್ 15ರಂದು ಎರಡು ಪ್ರತ್ಯೇಕ ಗುಂಪುಗಳಲ್ಲಿ ಇಲ್ಲಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಆಟಗಾರರ ಒಂದು ತಂಡವು ರಾಜಧಾನಿಯಿಂದ ಬೆಳಿಗ್ಗೆ ಪರ್ತ್‌ಗೆ ಹೊರಡಲಿದೆ. ಎರಡನೇ ತಂಡವು ಸಂಜೆ ನಿರ್ಗಮಿಸುವ ಸಾಧ್ಯತೆಯಿದೆ. ಆದರೆ ಇವೆಲ್ಲವೂ ಬಿಸಿನೆಸ್‌ ಕ್ಲಾಸ್‌ ಟಿಕೆಟ್‌ಗಳ ಲಭ್ಯತೆ ಆಧರಿಸಿರುತ್ತದೆ.

ತಂಡ ಹೊರಡುವ ಮೊದಲು, ಮಾಜಿ ನಾಯಕರಾದ ರೋಹಿತ್‌ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ನವದೆಹಲಿಯಲ್ಲಿ ಉಳಿದ ಆಟಗಾರರನ್ನು ಸೇರಿಕೊಳ್ಳಲಿದ್ದಾರೆ.

ADVERTISEMENT

ಪರ್ತ್‌ನಲ್ಲಿ ಅಕ್ಟೋಬರ್ 19ರಂದು ಮೊದಲ ಏಕದಿನ ಪಂದ್ಯ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.