ADVERTISEMENT

India vs England 5th Test| ಟೆಸ್ಟ್ ಇತಿಹಾಸದಲ್ಲೇ ದುಬಾರಿ ಓವರ್ ಎಸೆದ ಬ್ರಾಡ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 11:32 IST
Last Updated 2 ಜುಲೈ 2022, 11:32 IST
ಸ್ಟುವರ್ಟ್‌ ಬ್ರಾಡ್‌
ಸ್ಟುವರ್ಟ್‌ ಬ್ರಾಡ್‌   

ಎಜ್‌ಬಾಸ್ಟನ್: ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಶನಿವಾರ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಎಸೆದಿದ್ದಾರೆ. ಭಾರತ ಈ ಓವರ್‌ನಲ್ಲಿ ಬರೋಬ್ಬರಿ 35 ರನ್‌ಗಳನ್ನು ಗಳಿಸಿದೆ.

ಭಾರತದ ವಿರುದ್ಧ ಎಜ್‌ಬಾಸ್ಟ್‌ನ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನ 84ನೇ ಓವರ್‌ನಲ್ಲಿ ಬ್ರಾಡ್‌ ಅತಿ ಹೆಚ್ಚು ರನ್‌ಗಳನ್ನು ನೀಡಿದರು.

ಈ ಓವರ್‌ನಲ್ಲಿ ಭಾರತದ ನಾಯಕ ಜಸ್ಪ್ರೀತ್ ಬೂಮ್ರಾ 29 ರನ್ ಗಳಿಸಿದರು. ಇದರಲ್ಲಿ ನಾಲ್ಕು ಬೌಂಡರಿಗಳು, ಎರಡು ಸಿಕ್ಸರ್‌ ಅಡಗಿದ್ದವು. ಇನ್ನುಳಿದ ರನ್‌ಗಳು ಎಕ್ಸ್‌ಟ್ರಾಗಳಿಂದ ಬಂದಿವೆ.

ADVERTISEMENT

28 ರನ್‌ ನೀಡಿದ್ದು ಟೆಸ್ಟ್ ಇತಿಹಾಸದಲ್ಲಿನ ಈ ವರೆಗಿನ ದುಬಾರಿ ಓವರ್‌ ಆಗಿತ್ತು. 2003ರ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ನಡುವೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಬಿನ್‌ ಪೀಟರ್‌ಸನ್‌ ಅವರು 28ರನ್‌ ನೀಡಿದ್ದರು.

ಒಂಬತ್ತು ತಿಂಗಳುಗಳ ಹಿಂದೆ ಇಂಗ್ಲೆಂಡ್‌ ವಿರುದ್ಧ ನಡೆದಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು 2–1ರ ಮುನ್ನಡೆ ಸಾಧಿಸಿತ್ತು. ಆದರೆ, ಕೊನೆಯ ಟೆಸ್ಟ್ ಸಮಯಕ್ಕೆ ಆಟಗಾರರನ್ನು ಕೋವಿಡ್ ಕಾಡಿತ್ತು. ಅದರಿಂದಾಗಿ ಆ ಪಂದ್ಯವನ್ನು ಈಗ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.