ADVERTISEMENT

ಟಿ20 ವಿಶ್ವಕಪ್: 2026 ಸೇರಿ ಭಾರತ ಎಷ್ಟು ಬಾರಿ ಸಮಿಫೈನಲ್ ತಲುಪಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2026, 12:23 IST
Last Updated 2 ಮಾರ್ಚ್ 2026, 12:23 IST
<div class="paragraphs"><p>2024ರ ಟಿ20 ವಿಶ್ವಕಪ್ ಗೆಲುವು</p></div>

2024ರ ಟಿ20 ವಿಶ್ವಕಪ್ ಗೆಲುವು

   

(ಚಿತ್ರ ಕೃಪೆ: X/)

ಕೋಲ್ಕತ್ತ: ಟಿ20 ವಿಶ್ವಕಪ್ 2026ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಆ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ 6ನೇ ಬಾರಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದೆ.

ADVERTISEMENT

ವೆಸ್ಟ್ ಇಂಡೀಸ್ ತಂಡ ನೀಡಿದ್ದ 196 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡವು ಸಂಜು ಸ್ಯಾಮ್ಸನ್ (ಅಜೇಯ 97) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಇನ್ನೂ 4 ಎಸೆತಗಳು ಬಾಕಿ ಇರುವಂತೆ ಗುರಿ ತಲುಪಿ ಸೆಮಿಫೈನಲ್ ಪ್ರವೇಶಿಸಿದೆ.

ಹಾಲಿ ಚಾಂಪಿಯನ್ ಭಾರತ ತಂಡ 2007ರ ಉದ್ಘಾಟನಾ ಆವೃತ್ತಿ ಸೇರಿದಂತೆ ಇದುವರೆಗೆ 6 ಬಾರಿ ಸೆಮಿಫೈನಲ್ ತಲುಪಿದೆ. ಇದರಲ್ಲಿ 2 ಬಾರಿ ಪ್ರಶಸ್ತಿ ಗೆದ್ದಿದೆ. ಈ ಬಾರಿ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಭಾರತ ತಂಡ 2007, 2014, 2016, 2022, 2024 ಹಾಗೂ 2026 ರಲ್ಲಿ ಸೆಮಿಫೈನಲ್ ತಲುಪಿದೆ. ಇನ್ನೂ ಪಾಕಿಸ್ತಾನ ತಂಡ ಕೂಡ, 6 ಬಾರಿ ಸೆಮಿಫೈನಲ್ ತಲುಪಿದೆ. 2007, 2009, 2010, 2012, 2021 ಹಾಗೂ 2022 ರಲ್ಲಿ ಈ ಸಾಧನೆ ಮಾಡಿದೆ.

ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡ ಕೂಡ 6 ಬಾರಿ ಸೆಮಿಫೈನಲ್ ತಲುಪಿದೆ. 2010, 2016, 2021, 2022, 2024 ಹಾಗೂ 2026ರಲ್ಲಿ ಈ ಸಾಧನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.