
ಕೋಲ್ಕತ್ತ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 30 ರನ್‌ಗಳ ಸೋಲನುಭವಿಸಿದ ಬಳಿಕ ಮಾತನಾಡಿದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ‘ಈಡನ್ ಗಾರ್ಡನ್ ಪಿಚ್ ಆಡಲಾಗದಂತಿರಲಿಲ್ಲ, ನಾವು ಇದೇ ರೀತಿಯ ಪಿಚ್ ಕೇಳಿದ್ದೆವು’ ಎಂದು ಹೇಳಿದ್ದಾರೆ.
ಈಡನ್ ಗಾರ್ಡನ್ ಪಿಚ್ ಕ್ಯೂರೇಟರ್ ಸುಜನ್ ಮುಖರ್ಜಿ ಅವರು ನಾವು ಬಯಸಿದಂತಹ ಪಿಚ್ ಅನ್ನು ಪಂದ್ಯಕ್ಕಾಗಿ ಸಿದ್ದಪಡಿಸಿದ್ದಾರೆ. ಇಂತಹ ಪಿಚ್‌ನಲ್ಲಿ ರಕ್ಷಣಾತ್ಮಕವಾಗಿ ಆಡುವ ಆಟಗಾರ ಮಾತ್ರ ಉತ್ತಮ ಮೊತ್ತಗಳಿಸಲು ಸಾಧ್ಯ ಎಂದು ಹೇಳಿದ್ದಾರೆ.
ನಾವು ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್ ಬಯಸಿದ್ದೆವು. ಅಂತಹ ಪಿಚ್‌ಗಳಲ್ಲಿ ಟಾಸ್‌ಗೆ ತುಂಬಾ ಮಹತ್ವವಿರುವುದಿಲ್ಲ. ಒಂದು ವೇಳೆ ನಾವು ಪಂದ್ಯ ಗೆದ್ದಿದ್ದರೆ, ಪಿಚ್ ಗುಣಮಟ್ಟದ ಕುರಿತ ಪಶ್ನೆಗಳನ್ನೇ ಯಾರೂ ಕೇಳುತ್ತಿರಲಿಲ್ಲ ಎಂದಿದ್ದಾರೆ.
ಈಡನ್ ಗಾರ್ಡನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕೆ ನೀಡಿದ ಪಿಚ್ ಸಂಪೂರ್ಣ ಬೌಲರ್‌ಗಳಿಗೆ ನೆರವು ನೀಡಿತ್ತು. ಪಂದ್ಯದ ನಾಲ್ಕು ಇನಿಂಗ್ಸ್‌ಗಳಲ್ಲಿ ಎರಡೂ ತಂಡಗಳು ಕೂಡ 200 ರನ್ ಗಡಿದಾಟಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ 124 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತವು 93 ರನ್‌ಗಳಿಗೆ ಸರ್ವಪತನ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.