ADVERTISEMENT

ದ.ಆಫ್ರಿಕಾ ವಿರುದ್ಧ 408 ರನ್‌ಗಳ ಸೋಲು! ಇಲ್ಲಿವೆ ಭಾರತದ ದೊಡ್ಡ ಅಂತರದ ಸೋಲುಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2025, 12:34 IST
Last Updated 26 ನವೆಂಬರ್ 2025, 12:34 IST
<div class="paragraphs"><p>ಭಾರತ ತಂಡ</p></div>

ಭಾರತ ತಂಡ

   

ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ 408 ರನ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿತು. ಆ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಅತೀ ಹೆಚ್ಚು ರನ್‌ಗಳ ಅಂತರದ ಸೋಲು ಅನುಭವಿಸಿದ ಅಪಖ್ಯಾತಿಗೆ ಒಳಗಾಯಿತು.

ಮೊದಲ ಪಂದ್ಯದಲ್ಲಿ 30 ರನ್‌ಗಳಿಂದ ಸೋಲು ಅನುಭವಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕನಾಗಿ ರಿಷಬ್ ಪಂತ್ ತಂಡವನ್ನು ಮುನ್ನಡೆಸಿದರು. ಈ ಪಂದ್ಯದಲ್ಲಿ ಭಾರತ ನೀರಸ ಪ್ರದರ್ಶನ ನೀಡುವ ಮೂಲಕ ಹೀನಾಯ ಸೋಲು ಅನುಭವಿಸಿ, ಸರಣಿಯನ್ನು 2–0 ಅಂತರದಲ್ಲಿ ಸೋತಿತು.

ADVERTISEMENT

ಭಾರತದ ಅತೀ ಹೆಚ್ಚು ರನ್‌ಗಳ ಅಂತರದ ಸೋಲುಗಳು

ಇಂದಿನ ಸೋಲಿನೊಂದಿಗೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್‌ಗಳ ಅಂತರದ ಸೋಲು ಅನುಭವಿಸಿದ ಅಪಖ್ಯಾತಿಗೆ ಒಳಗಾಯಿತು. ಇದಕ್ಕೂ ಮೊದಲು 2004 ರಲ್ಲಿ ನಾಗಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯವನ್ನು 342 ರನ್‌ಗಳ ಅಂತರದಲ್ಲಿ ಸೋತಿದ್ದು, ಈ ಹಿಂದಿನ ಅತೀ ಹೆಚ್ಚು ರನ್ ಅಂತರದ ಸೋಲಾಗಿತ್ತು.

2006ರಲ್ಲಿ ಕರಾಚಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 341 ರನ್‌ಗಳ ಅಂತರದಲ್ಲಿ ಸೋತಿದ್ದು ಭಾರತ ತಂಡದ ಮೂರನೇ ಅತೀ ಹೆಚ್ಚು ರನ್‌ಗಳ ಅಂತರದ ಸೋಲು. ಇನ್ನೂ ನಾಲ್ಕನೇ ಸ್ಥಾನದಲ್ಲಿ 2007ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಸೋತಿದ್ದ 337 ರನ್ ಅಂತರದ ಸೋಲು ಇದೆ.

ಇನ್ನೂ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲೂ ಭಾರತ ತಂಡ 333 ರನ್‌ಗಳ ಅಂತರದ ಸೋಲು ಕಂಡಿತ್ತು. ಆದರೆ, ಇದೇ ಮೊದಲ ಬಾರಿಗೆ 400ಕ್ಕೂ ಅಧಿಕ ರನ್‌ಗಳ ಅಂತರದ ಸೋಲು ಕಾಣುವ ಮೂಲಕ ಕಳಪೆ ದಾಖಲೆ ಮಾಡಿತು.

ಅತೀ ಹೆಚ್ಚು ರನ್ ಅಂತರದ ಸೋಲುಗಳು

  • 408 – ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿ

  • 342–ಆಸ್ಟ್ರೇಲಿಯಾ ವಿರುದ್ಧ ನಾಗಪುರ

  • 341–ಪಾಕಿಸ್ತಾನ ವಿರುದ್ಧ ಕರಾಚಿ

  • 333–ಆಸ್ಟ್ರೇಲಿಯಾ ವಿರುದ್ಧ ಪುಣೆ

  • 329–ದಕ್ಷಿಣ ಆಫ್ರಿಕಾ ವಿರುದ್ಧ – ಕೊಲ್ಕತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.