ADVERTISEMENT

U19 World Cup Final: ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 13:44 IST
Last Updated 5 ಫೆಬ್ರುವರಿ 2022, 13:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆ್ಯಂಟಿಗುವಾ: 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದಿರುವ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಆ್ಯಂಟಿಗುವಾ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಜಿದ್ದಾಜಿದ್ದಿನ ಪಂದ್ಯ ನಡೆಯುತ್ತಿದೆ.

ಸತತ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತ ಐದನೇ ಬಾರಿಗೆ ಕಿರೀಟ ಗೆಲ್ಲುವ ಛಲದಲ್ಲಿದೆ. ಯಶ್ ಧುಳ್ ನೇತೃತದ ಯುವ ತಂಡವು ಟೂರ್ನಿಯುದ್ಧಕ್ಕೂ ಅಮೋಘ ನಿರ್ವಹಣೆಯನ್ನು ನೀಡಿದೆ.

ADVERTISEMENT

ನಾಲ್ವರು ಆಟಗಾರರು ಕೋವಿಡ್‌ಗೆ ತುತ್ತಾಗಿದ್ದರೂ ಪ್ರಭಾವಿ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಅತ್ತ ಇಂಗ್ಲೆಂಡ್ ತಂಡವು 24 ವರ್ಷಗಳ ಬಳಿಕ ಮತ್ತೆ ಟ್ರೋಫಿ ಗೆಲ್ಲುವ ಇರಾದೆಯಲ್ಲಿದೆ. 1998ರಲ್ಲಿ ಆಂಗ್ಲರ ಪಡೆ ಚಾಂಪಿಯನ್ ಆಗಿತ್ತು.

ಭಾರತ ಚಾಂಪಿಯನ್ ಆದ ವರ್ಷಗಳು: 2000, 2008, 2012, 2018
ರನ್ನರ್-ಅಪ್: 2006, 2016, 2020

ತಾಜಾ ವರದಿಗಳ ಪ್ರಕಾರ ಇಂಗ್ಲೆಂಡ್ 5 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.