19 ವರ್ಷದೊಳಗಿನವರ ಭಾರತ ತಂಡ
ಶಾರ್ಜಾ: ಹದಿಮೂರು ವರ್ಷದ ಪೋರ ವೈಭವ್ ಸೂರ್ಯವಂಶಿ ಅವರ ಪ್ರತಿಭೆಯನ್ನು ಸಾಬೀತುಪಡಿಸಿದರು. ಅವರ ಸಾಮರ್ಥ್ಯದ ಕುರಿತು ಅಚ್ಚರಿ, ಅನುಮಾನ ವ್ಯಕ್ತಪಡಿಸಿದವರಿಗೆ ಇಲ್ಲಿ ತಕ್ಕ ಉತ್ತರ ನೀಡಿದರು.
ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಲು ವೈಭವ್ (ಔಟಾಗದೆ 76; 46ಎ, 4X3, 6X6) ಅರ್ಧಶತಕದ ಕಾಣಿಕೆ ನೀಡಿದರು.
ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತದ 19 ವರ್ಷದೊಳಗಿನವರ ತಂಡವು 10 ವಿಕೆಟ್‌ಗಳಿಂದ ಜಯಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಯುಎಇ ತಂಡವು 44 ಓವರ್‌ಗಳಲ್ಲಿ 137 ರನ್ ಗಳಿಸಿತು. ರಯಾನ್ ಖಾನ್ (35; 48ಎ, 4X3, 6X1) ಮತ್ತು ಅಕ್ಷತ್ ರಾಯ್ (26; 52ಎ) ಅವರುತಂಡಕ್ಕೆ ಆಸರೆಯಾದರು.
ಭಾರತ ತಂಡದ ಯುದ್ಧಜೀತ್ ಗುಹಾ (15ಕ್ಕೆ3), ಚೇತನ್ ಶರ್ಮಾ (27ಕ್ಕೆ2) ಮತ್ತು ಕರ್ನಾಟಕದ ಹುಡುಗ ಹಾರ್ದಿಕ್ ರಾಜ್ (28ಕ್ಕೆ2)ಅವರು ಯುಎಇ ತಂಡದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು.
ಗುರಿ ಬೆನ್ನಟ್ಟಿದ ಭಾರತ ತಂಡವು 16.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 143 ರನ್ ಗಳಿಸಿ ಜಯಿಸಿತು.
ವೈಭವ್ ಮತ್ತು ಆಯುಷ್ ಮಾತ್ರೆ (ಔಟಾಗದೆ 67, 51ಎ, 4X4, 6X4) ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈಚೆಗೆ ನಡೆದಿದ್ದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ₹ 1.10 ಕೋಟಿ ನೀಡಿ ಬಿಹಾರ್ ಮೂಲದ ವೈಭವ್ ಸೂರ್ಯವಂಶಿಯನ್ನು ಖರೀದಿಸಿತ್ತು. ಐಪಿಎಲ್‌ನಲ್ಲಿ ಆಯ್ಕೆಯಾದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಅವರಾಗಿದ್ದಾರೆ.
ಸಂಕ್ಷಿಪ್ತ ಸ್ಕೋರು:
ಯುಎಇ: 44 ಓವರ್‌ಗಳಲ್ಲಿ 137 (ಮೊಹಮ್ಮದ್ ರಯಾನ್ 35, ಯುದ್ಧಜೀತ್ ಗುಹಾ (15ಕ್ಕೆ3, ಚೇತನ್ ಶರ್ಮಾ 27ಕ್ಕೆ2, ಹಾರ್ದಿಕ್ ರಾಜ್ 28ಕ್ಕೆ2) ಭಾರತ: 16.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 143 (ವೈಭವ್ ಸೂರ್ಯವಂಶಿ ಔಟಾಗದೆ 76, ಆಯುಷ್ ಮಾತ್ರೆ ಔಟಾಗದೆ 67) ಫಲಿತಾಂಶ ಭಾರತ ತಂಡಕ್ಕೆ 10 ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.