ADVERTISEMENT

Asia Cup–2022 | ಭಾರತದ ವಿರುದ್ಧ ಟಾಸ್ ಗೆದ್ದ ಅಫ್ಗಾನಿಸ್ತಾನ ಬೌಲಿಂಗ್ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಸೆಪ್ಟೆಂಬರ್ 2022, 13:55 IST
Last Updated 8 ಸೆಪ್ಟೆಂಬರ್ 2022, 13:55 IST
   

ದುಬೈ: ಈ ಬಾರಿಯ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ರೇಸ್‌ನಿಂದ ಹೊರಬಿದ್ದಿರುವ ಭಾರತ ಹಾಗೂ ಅಫ್ಗಾನಿಸ್ತಾನ ತಂಡಗಳು ಇಂದು ಸೂಪರ್‌–4 ಹಂತದ ಕೊನೇ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿವೆ.ಟಾಸ್‌ ಗೆದ್ದಿರುವ ಅಫ್ಗಾನಿಸ್ತಾನ ಪಡೆ ಬೌಲಿಂಗ್ ಆಯ್ದುಕೊಂಡಿದೆ.

ಉಭಯ ತಂಡಗಳುಸೂಪರ್‌–4 ಹಂತದಲ್ಲಿ ತಾವಾಡಿದ ಮೊದಲೆರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ಸೋಲು ಕಂಡಿವೆ.

ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ರೂಪಿಸುವತ್ತ ಚಿತ್ತ ನೆಟ್ಟಿರುವ ಭಾರತ ತಂಡಕ್ಕೆ ಈ ಪಂದ್ಯವೂ ಪ್ರಯೋಗಕ್ಕೆ ವೇದಿಕೆಯಾಗಿದೆ.

ADVERTISEMENT

ಭಾರತ ಪರ ನಾಯಕ ರೋಹಿತ್‌ ಶರ್ಮಾ, ಅನುಭವಿ ಹಾರ್ದಿಕ್‌ ಪಾಂಡ್ಯಹಾಗೂ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್ ತಂಡ ಮುನ್ನಡೆಸಲಿದ್ದಾರೆ. ಪಾಂಡ್ಯ ಮತ್ತು ಚಾಹಲ್‌ ಬದಲು ಮಧ್ಯಮವೇಗಿ ದೀಪಕ್‌ ಚಾಹರ್‌ ಹಾಗೂ ಅಕ್ಷರ್‌ ಪಟೇಲ್ ಆಡಲಿದ್ದಾರೆ.

ಆಡುವ ಹನ್ನೊಂದರ ಬಳಗ
ಭಾರತ
: ಕೆ.ಎಲ್‌.ರಾಹುಲ್‌ (ನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್ ಯಾದವ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ದೀಪಕ್‌ ಚಾಹರ್, ಭುವನೇಶ್ವರ್‌ ಕುಮಾರ್‌, ಅರ್ಶದೀಪ್‌ ಸಿಂಗ್‌

ಅಫ್ಗಾನಿಸ್ತಾನ: ಹಜ್ರತ್‌ವುಲ್ಲಾ ಝಜೈ, ರಹಮನುಲ್ಲಾ ಗುರ್ಬಾಜ್‌, ಇಬ್ರಾಹಿಂ ಜರ್ದಾನ್, ಕರೀಂ ಜನ್ನತ್, ನಜೀಬುಲ್ಲಾ ಜರ್ದಾನ್‌, ಮೊಹಮ್ಮದ್ ನಬಿ(ನಾಯಕ), ಅಜ್ಮತುಲ್ಲಾ ಒಮರ್ಜೈ, ರಶೀದ್‌ ಖಾನ್‌, ಮುಜೀಬ್‌ ಉರ್‌ ರಹಮಾನ್, ಪರೀದ್‌ ಅಹ್ಮದ್‌, ಫಜಲ್‌ಹಕ್‌ ಫಾರೂಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.