ADVERTISEMENT

IND vs BAN | ಪಿಂಕ್ ಟೆಸ್ಟ್‌ನಲ್ಲಿ ವೇಗದ ಭರಾಟೆ: ಬೆದರಿದ ಬಾಂಗ್ಲಾ ಹುಲಿಗಳು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 10:31 IST
Last Updated 22 ನವೆಂಬರ್ 2019, 10:31 IST
   

ಕೋಲ್ಕತ್ತ:ಐತಿಹಾಸಿಕ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಬಿಗುವಿನ ದಾಳಿ ನಡೆಸಿದ ಭಾರತ ಬೌಲರ್‌ಗಳು ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳ ಮೇಲೆ ಸವಾರಿ ನಡೆಸಿದ್ದಾರೆ. ಟಾಸ್‌ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಪ್ರವಾಸಿ ಪಡೆ ಊಟದ ವಿರಾಮದ ಹೊತ್ತಿಗೆ ಕೇವಲ 73 ರನ್‌ ಗಳಿಸಿ ಪ್ರಮುಖ 6 ವಿಕೆಟ್‌ ಕಳೆದುಕೊಂಡಿದೆ.

ಬಾಂಗ್ಲಾ ಪರ ಆರಂಭಿಕ ಬ್ಯಾಟ್ಸ್‌ಮನ್‌ ಶಾದಮನ್‌ ಇಸ್ಲಾಂ(29), ಲಿಟನ್ ದಾಸ್‌ ಹೊರತು ಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. ಇಸ್ಲಾಂ ಜೊತೆ ಇನಿಂಗ್ಸ್‌ ಆರಂಭಿಸಿದ ಇಮ್ರುಲ್‌ ಕಯೆಸ್‌ 4 ರನ್‌ಗಳಿಸಿದರೆ, ಅನುಭವಿ ಮೊಹಮದುಲ್ಲಾ 6 ರನ್‌ ಗಳಿಸಿ ಔಟಾದರು. ನಾಯಕ ಮೊಮಿನುಲ್‌ ಹಕ್‌, ಮೊಹಮದ್‌ ಮಿಥುನ್‌ ಹಾಗೂ ಅನುಭವಿ ಮುಷಿಕುರ್‌ ರಹೀಂ ಸೊನ್ನೆ ಸುತ್ತಿದರು.

ADVERTISEMENT

ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿರುವ ಮೊಮಿನುಲ್‌ ಬಳಗಕ್ಕೆ ಕೆಳಕ್ರಮಾಂಕದಲ್ಲಿ ದಾಸ್‌ ಭರವಸೆಯಾಗಿದ್ದಾರೆ.24ರನ್‌ ಗಳಿಸಿ ಆಡುತ್ತಿರುವ ಅವರು ಇನ್ನೂ ಖಾತೆ ತೆರೆಯದ ನಯೀನ್‌ ಹಸನ್‌ ಜೊತೆ ಕ್ರಿಸ್‌ನಲ್ಲಿದ್ದಾರೆ.

ಪ್ರವಾಸಿ ಪಡೆಯ ಆರೂ ವಿಕೆಟ್‌ಗಳನ್ನು ವೇಗಿಗಳೇ ಹಂಚಿಕೊಂಡರು.ಉಮೇಶ್‌ ಯಾದವ್‌ ಮೂರು, ಇಶಾಂತ್‌ ಶರ್ಮಾ ಎರಡು ಮತ್ತು ಮೊಹಮದ್‌ ಶಮಿ ಒಂದು ವಿಕೆಟ್ ಕಬಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು: ಐತಿಹಾಸಿಕ ಪಿಂಕ್‌ ಟೆಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.