ADVERTISEMENT

India vs England|100ನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಜೋ ರೂಟ್ ಸ್ಮರಣೀಯ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2021, 11:26 IST
Last Updated 5 ಫೆಬ್ರುವರಿ 2021, 11:26 IST
ಜೋ ರೂಟ್‌ (ಸಂಗ್ರಹ ಚಿತ್ರ: ಪಿಟಿಐ)
ಜೋ ರೂಟ್‌ (ಸಂಗ್ರಹ ಚಿತ್ರ: ಪಿಟಿಐ)   

ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಇಂಗ್ಲೆಂಡ್‌ ನಾಯಕ ಜೋ ರೂಟ್‌ ಶತಕ ಗಳಿಸಿ ದಾಖಲೆ ಬರೆದಿದ್ದಾರೆ.

ತಮ್ಮ ನೂರನೇ ಪಂದ್ಯದಲ್ಲಿ ಅವರು ನೂರು ರನ್‌ ಗಳಿಸಿ ಸಂಭ್ರಮಿಸಿದ್ದಾರೆ. ನೂರನೇ ಪಂದ್ಯದಲ್ಲಿ ಶತಕ ಗಳಿಸಿದ ವಿಶ್ವದ 9ನೇ ಆಟಗಾರ ಎಂಬ ಖ್ಯಾತಿಗೆ ಜೋ ರೂಟ್ ಪಾತ್ರರಾದರು. ಇಂದಿನ ಶತಕವೂ ಸೇರಿ ರೂಟ್‌ ಅವರ ಖಾತೆಯಲ್ಲಿ ಒಟ್ಟು 20 ಟೆಸ್ಟ್‌ ಶತಕಗಳಿವೆ

ಹ್ಯಾಟ್ರಿಕ್‌ ಶತಕ: ವಿಶ್ವದ ಮೊದಲ ಸಾಧನೆ

ADVERTISEMENT

ನೂರನೇ ಪಂದ್ಯದಲ್ಲಿ ಶತಕಗಳಿಸಿದ ಜೋ ರೂಟ್‌ ಇಲ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ. ಈ ಹಿಂದಿನ 98, 99ನೇ ಪಂದ್ಯದಲ್ಲೂ ಅವರು ಶತಕ ಗಳಿಸಿದ್ದರು. 98, 99, 100ನೇ ಪಂದ್ಯದ ಮೂಲಕ ಹ್ಯಾಟ್ರಿಕ್‌ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಯನ್ನೂ ಅವರು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದಿನ ಎರಡು ಶತಕಗಳು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೂಡಿ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.