ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ನವದೆಹಲಿ: ಶುಭಮನ್ ಗಿಲ್ ನಾಯಕತ್ವದ ಭಾರತ ತಂಡದಲ್ಲಿ ಪ್ರತಿಭಾವಂತ ಆಟಗಾರರ ದಂಡೇ ಇದೆ. ಆದರೂ, ವಿರಾಟ್ ಕೊಹ್ಲಿಯವರ ಪ್ರಭಾವಳಿಯನ್ನು ಟೀಂ ಇಂಡಿಯಾ ಮಿಸ್ ಮಾಡಿಕೊಳ್ಳಲಿದೆ ಎಂದು ಇಂಗ್ಲೆಂಡ್ ತಂಡದ ಉಪನಾಯಕ ಓಲಿ ಪೋಪ್ ಹೇಳಿದ್ದಾರೆ.
ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20ರಂದು ಆರಂಭವಾಗಲಿದೆ.
ಟೀಂ ಇಂಡಿಯಾ ನಾಯಕರಾಗಿದ್ದ ರೋಹಿತ್ ಶರ್ಮಾ ಅವರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರ ಬೆನ್ನಲ್ಲೇ, ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರೂ ದೀರ್ಘ ಮಾದರಿಗೆ ನಿವೃತ್ತಿ ಘೋಷಿಸಿದ್ದರು.
ರೋಹಿತ್ ನಿರ್ಗಮನದ ಬಳಿಕ ಗಿಲ್ ಅವರಿಗೆ ತಂಡದ ಹೊಣೆ ವಹಿಸಲಾಗಿದೆ.
ಭಾರತ ತಂಡದ ಕುರಿತು 'talkSPORT Cricket' ಜೊತೆ ಮಾತನಾಡಿರುವ ಪೋಪ್, 'ಇದು ಯುವ ಪಡೆಯಾದರೂ, ಸಾಕಷ್ಟು ಪ್ರತಿಭಾವಂತರಿದ್ದಾರೆ. ನಾಯಕನಾಗಿರುವ ಶುಭಮನ್ ಗಿಲ್ ಅತ್ಯುತ್ತಮ ಆಟಗಾರ. ಆದರೆ, ಸ್ಲಿಪ್‌ನಲ್ಲಿ ನಿಲ್ಲುತ್ತಿದ್ದ ವಿರಾಟ್ ಕೊಹ್ಲಿ ಅವರ ಪ್ರಭಾವಳಿಯನ್ನು ಟೀಂ ಇಂಡಿಯಾ ಮಿಸ್ ಮಾಡಿಕೊಳ್ಳಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಆತ್ಮವಿಶ್ವಾಸದಿಂದ ಇರುವ ಯುವ ಆಟಗಾರರನ್ನು ಎದುರಿಸಲು ನಮ್ಮ ತಂಡ ಸಜ್ಜಾಗಿದೆ' ಎಂದೂ ಹೇಳಿದ್ದಾರೆ
ಭಾರತ ಕ್ರಿಕೆಟ್ ತಂಡವು 2007ರಿಂದ ಈಚೆಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. 2011, 2014 ಹಾಗೂ 2018ರಲ್ಲಿ ಸೋಲು ಕಂಡಿದ್ದ ಟೀಂ ಇಂಡಿಯಾ, 2021–22ರಲ್ಲಿ ಡ್ರಾ ಸಾಧಿಸಿತ್ತು.
ವೇಳಾಪಟ್ಟಿ
ಮೊದಲ ಪಂದ್ಯ: ಹೆಡಿಂಗ್ಲೇ, ಲೀಡ್ಸ್ (ಜೂನ್ 20 – 24)
ಎರಡನೇ ಪಂದ್ಯ: ಎಜ್‌ಬಾಸ್ಟನ್, ಬರ್ಮಿಂಗ್‌ಹ್ಯಾಂ (ಜುಲೈ 02 – 06)
ಮೂರನೇ ಪಂದ್ಯ: ಲಾರ್ಡ್ಸ್, ಲಂಡನ್ (ಜುಲೈ 10 – 14)
ನಾಲ್ಕನೇ ಪಂದ್ಯ: ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ (ಜುಲೈ 23 – 27)
ಐದನೇ ಪಂದ್ಯ: ಕಿಂಗ್ಸ್‌ಟನ್ ಓವಲ್, ಲಂಡನ್ (ಜುಲೈ 31 – ಆಗಸ್ಟ್ 04)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.