ವಿರಾಟ್ ಕಾಲಿಗೆ ಬಿದ್ದ ಅಭಿಮಾನಿ
ಚಿತ್ರ:@mufaddal_vohra
ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ತಮ್ಮ 52ನೇ ಶತಕ ಸಿಡಿಸಿ ಮಿಂಚಿದರು. ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಭದ್ರತಾ ಲೋಪವಾಗಿರುವುದು ಕೂಡ ಕಂಡು ಬಂದಿದೆ.
ವಿರಾಟ್ ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಮೈದಾನಕ್ಕೆ ನುಗ್ಗಿದ ಅವರ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ವಿರಾಟ್‌ರತ್ತ ಜೋರಾಗಿ ಓಡಿ ಬರುತ್ತಾರೆ. ಬಂದ ತಕ್ಷಣ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ.
ತಕ್ಷಣ ಓಡಿಬಂದ ಭದ್ರತಾ ಸಿಬ್ಬಂದಿ ಕೊಹ್ಲಿ ಅಭಿಮಾನಿಯನ್ನು ಹಿಡಿದುಕೊಂಡು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗುತ್ತಾರೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಈ ರೀತಿಯ ಘಟನೆಗಳು ಅನೇಕ ಸಂದರ್ಭ ಜರುಗಿರುವುದನ್ನು ಕಾಣಬಹುದು.
ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕ್ರಿಕೆಟ್ ವೀಕ್ಷಣೆ ಮಾಡುತ್ತಿದ್ದ ವಿರಾಟ್ ಕೊಹ್ಲಿಯವರ ಅಭಿಮಾನಿ ವಿರಾಟ್ ಶತಕ ಸಿಡಿಸುತ್ತಿದ್ದಂತೆ ಮೈದಾನಕ್ಕೆ ನುಗ್ಗಿ ನೇರವಾಗಿ ವಿರಾಟ್ ಬಳಿ ಬಂದು ಕಾಲಿಗೆ ಬೀಳುತ್ತಾರೆ. ಕೂಡಲೇ ಬಂದ ಭದ್ರತಾ ಸಿಬ್ಬಂದಿ ಆತನನ್ನು ಎಳೆದುಕೊಂಡು ಹೋಗುತ್ತಾರೆ. ಆದರೆ, ಆ ಅಭಿಮಾನಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ವಿರಾಟ್ ಆಶೀರ್ವಾದ ಪಡೆದ ಸಂಭ್ರಮದಲ್ಲಿ ವಾಪಸ್ಸಾಗುವುದನ್ನು ಕಾಣಬಹುದು.
ಸದ್ಯ, ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದ್ದು, ಅನೇಕರು ವಿರಾಟ್ ಕೊಹ್ಲಿಯವರ ಪ್ರತೀ ಅಭಿಮಾನಿಯ ಕನಸು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.