ADVERTISEMENT

IND vs SL 2ನೇ ಟಿ20 ಪಂದ್ಯ: ಟಾಸ್‌ ಗೆದ್ದ ಭಾರತ ಬೌಲಿಂಗ್ ಆಯ್ಕೆ

ಚುಟುಕು ಕ್ರಿಕೆಟ್ ಸರಣಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 13:44 IST
Last Updated 7 ಜನವರಿ 2020, 13:44 IST
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಶ್ರೀಲಂಕಾ ನಾಯಕ ಲಸಿತ್ ಮಾಲಿಂಗ (ಟ್ವಿಟರ್‌ ಚಿತ್ರ)
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಶ್ರೀಲಂಕಾ ನಾಯಕ ಲಸಿತ್ ಮಾಲಿಂಗ (ಟ್ವಿಟರ್‌ ಚಿತ್ರ)   

ಇಂದೋರ್‌: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಗುವಾಹಟಿಯಲ್ಲಿ ಆಯೋಜನೆಯಾಗಿದ್ದ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹಾಗಾಗಿ ಇಲ್ಲಿನ ಹೋಳ್ಕರ್‌ ಆಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವು ಸಾಧಿಸಿ ಇನಿಂಗ್ಸ್‌ ಮುನ್ನಡೆ ಸಾಧಿಸುವ ಯೋಜನೆಯೊಂದಿಗೆ ಉಭಯ ತಂಡಗಳು ಕಣಕ್ಕಿಳಿದಿವೆ.

ಸದ್ಯ ಎರಡು ಓವರ್‌ ಮುಕ್ತಾಯವಾಗಿದ್ದು ಲಂಕಾ ಪಡೆ ವಿಕೆಟ್‌ ನಷ್ಟವಿಲ್ಲದೆ12 ರನ್‌ ಗಳಿಸಿದೆ.ಧನುಷ್ಕಾ ಗುಣತಿಲಕ (0)ಹಾಗೂಆವಿಷ್ಕ ಫರ್ನಾಂಡೊ (9) ಕ್ರೀಸ್‌ನಲ್ಲಿದ್ದಾರೆ.

ADVERTISEMENT

ತಂಡಗಳು
ಭಾರತ:
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ಕೆ.ಎಲ್‌.ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್‌, ವಾಷಿಂಗ್ಟನ್ ಸುಂದರ್‌

ಶ್ರೀಲಂಕಾ: ಲಸಿತ್ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಆವಿಷ್ಕ ಫರ್ನಾಂಡೊ, ದಾಸುನ್ ಶನಕ, ಕುಶಾಲ್ ಪೆರೇರ, ಧನಂಜಯ ಡಿಸಿಲ್ವ, ಇಸುರು ಉಡಾನ, ಭಾನುಕ ರಾಜಪಕ್ಸ, ಒಶಾಡ ಫರ್ನಾಂಡೊ, ವನಿಂದು ಹಸರಂಗ, ಲಾಹಿರು ಕುಮಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.