ADVERTISEMENT

IND vs WI 1st ODI | 1000ನೇ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ 

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 14:42 IST
Last Updated 6 ಫೆಬ್ರುವರಿ 2022, 14:42 IST
ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಖರಿ
ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಖರಿ    

ಅಹಮದಾಬಾದ್‌: ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಅಂಗಳದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಭಾರತವು ತನ್ನ 1000ನೇ ಪಂದ್ಯವನ್ನು ಗೆದ್ದು ಇತಿಹಾಸ ಬರೆದಿದೆ.

ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತವು 1-0 ಅಂತರದ ಮುನ್ನಡೆ ಸಾಧಿಸಿದೆ.

ಟಾಸ್‌ಗೆದ್ದು ಫೀಲ್ಡಿಂಗ್‌ ಆರಿಸಿಕೊಂಡಿದ್ದ ಭಾರತ ವಿಂಡಿಸ್‌ ತಂಡವನ್ನು 176 (43.5) ರನ್‌ಗಳಿಗೆ ಕಟ್ಟಿ ಹಾಕಿತ್ತು. ಇದನ್ನು ಬೆನ್ನು ಹತ್ತಿದ ಟೀಂ ಇಂಡಿಯಾಕ್ಕೆ ನಾಯಕ ರೋಹಿತ್‌ ಶರ್ಮಾ ಮತ್ತು ಇಶಾನ್‌ ಕಿಶನ್‌ ಅವರಿಂದ ಅದ್ಭುತ ಆರಂಭ ದೊರೆಯಿತು. ಆದರೆ, 28ರನ್‌ ಗಳಿಸಿದ್ದ ಇಶಾನ್‌ ಕಿಶನ್‌ ಅವರು ಔಟ್‌ ಆಗುವ ಮೂಲಕ ಭಾರತ ಆರಂಭಿಕ ಆಘಾತ ಎದುರಿಸಿತು.

ADVERTISEMENT

ನಂತರ ಬಂದ ವಿರಾಟ್‌ ಕೊಹ್ಲಿ (8), ರಿಷಭ್‌ ಪಂಥ್‌ (11) ಭರವಸೆಯ ಆಟವಾಡಲಿಲ್ಲ. ಆದರೆ, ಸೂರ್ಯ ಕುಮಾರ್‌(34) ಮತ್ತು ದೀಪಕ್‌ ಹೂಡಾ (26) ಜೋಡಿ ತಂಡವನ್ನು ಗೆಲುವಿನ ದಡ ಸೇರಿಸಿತು.

ಅಂತಿಮವಾಗಿ ಭಾರತ ಇನ್ನು 22 ಓವರ್‌ಗಳಿರುವಾಗಲೇ 6 ವಿಕೆಟ್‌ಗಳ ಜಯ ಸಾಧಿಸಿತು.

ಐತಿಹಾಸಿಕ ಪಂದ್ಯದಲ್ಲಿ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಅರ್ಧ ಶತಕ (60) ಸಿಡಿಸಿ ಗಮನಸೆಳೆದರು.

ಭಾರತವು 1,000 ಏಕದಿನ ಪಂದ್ಯಗಳನ್ನಾಡಿದ ವಿಶ್ವದ ಮೊದಲ ತಂಡ ಎನಿಸಿಕೊಂಡಿದೆ. 958 ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾ ಮತ್ತು 936 ಪಂದ್ಯವನ್ನಾಡಿರುವ ಪಾಕಿಸ್ತಾನ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಈ ಪಂದ್ಯವು ಭಾರತದ ಪಾಲಿಗೆ ಮಹತ್ವದ್ದೆನಿತ್ತು.


ಸಂಕ್ಷಿಪ್ತ ಸ್ಕೋರ್‌
ವೆಸ್ಟ್‌ಇಂಡೀಸ್‌: 176 (43.5)
ಭಾರತ: 178/4 (28)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.