ADVERTISEMENT

IND vs WI | ಬೃಹತ್ ಮೊತ್ತದತ್ತ ಟೀಂ ಇಂಡಿಯಾ: ಎರಡನೇ ದಿನದ ಮೊದಲ ಅವಧಿಗೆ 427\4

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2025, 6:22 IST
Last Updated 11 ಅಕ್ಟೋಬರ್ 2025, 6:22 IST
<div class="paragraphs"><p>ವಿಂಡೀಸ್ ವಿರುದ್ಧ ಗಿಲ್ ಬ್ಯಾಟಿಂಗ್</p></div>

ವಿಂಡೀಸ್ ವಿರುದ್ಧ ಗಿಲ್ ಬ್ಯಾಟಿಂಗ್

   

ಚಚಿತ್ರ ಕೃಪೆ: ಬಿಸಿಸಿಐ

ದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನ ಎರಡನೇ ದಿನದಾಟದ ಮೊದಲ ಅವಧಿಗೆ ಭಾರತ 4 ವಿಕೆಟ್ ಕಳೆದುಕೊಂಡು 427 ರನ್ ಕಲೆಹಾಕಿದೆ. ಮಾತ್ರವಲ್ಲ, ಬೃಹತ್ ಮೊತ್ತ ಕಲೆಹಾಕುವತ್ತ ದಾಪುಗಾಲಿಟ್ಟಿದೆ.

ADVERTISEMENT

ಮೊದಲ ದಿನದಾಟದಲ್ಲಿ 20 ರನ್ ಗಳಿಸಿ ಅಜೇಯರಾಗಿದ್ದ ನಾಯಕ ಶುಭಮನ್ ಗಿಲ್ (75*) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ (7*) ಅಜೇಯರಾಗಿದ್ದು, ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

‌ನಿನ್ನೆ 173 ರನ್ ಸಿಡಿಸಿ ಅಜೇಯರಾಗಿದ್ದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಇಂದು ಕೇವಲ 2 ರನ್ ಸೇರಿಸಿ ರನೌಟ್ ಆಗಿ ಹೊರನಡೆದರು. ಬಳಿಕ ಬಂದ ನಿತೀಶ್ ಕುಮಾರ್ ರೆಡ್ಡಿ 43 ರನ್ ಸಿಡಿಸಿ ಔಟ್ ಆದರು. ಸದ್ಯ ಮೊದಲ ಸೆಷನ್ ಮುಕ್ತಾಯದ ಹೊತ್ತಿಗೆ ಟೀಂ ಇಂಡಿಯಾ 427 ರನ್‌ ಗಳಿಸಿ ಬೃಹತ್ ಮೊತ್ತ ಕಲೆಹಾಕುವತ್ತ ಹೆಜ್ಜೆ ಇಟ್ಟಿದೆ. ವಿಂಡೀಸ್ ಪರ ಜೋಮೆಲ್ ವಾರಿಕನ್ 3 ವಿಕೆಟ್ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.