ADVERTISEMENT

Womens WC| ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿಗೆ ಇವರೇ ಕಾರಣ: ಹರ್ಮನ್‌ಪ್ರೀತ್ ಬೇಸರ

ಪಿಟಿಐ
Published 10 ಅಕ್ಟೋಬರ್ 2025, 5:28 IST
Last Updated 10 ಅಕ್ಟೋಬರ್ 2025, 5:28 IST
<div class="paragraphs"><p>ಹರ್ಮನ್‌ಪ್ರೀತ್ ಕೌರ್&nbsp;</p></div>

ಹರ್ಮನ್‌ಪ್ರೀತ್ ಕೌರ್ 

   

ವಿಶಾಖಪಟ್ಟಣ: ಮಹಿಳಾ ಏಕದಿನ ವಿಶ್ವಕಪ್‌ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ತಂಡ ಮೂರು ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಾತನಾಡಿ, ನಮ್ಮ ಟಾಪ್ ಆರ್ಡರ್ ಬ್ಯಾಟರ್‌ಗಳು ಜವಾಬ್ದಾರಿ ವಹಿಸಿಕೊಳ್ಳದಿರುವುದೇ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದರು.

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಏಕಾಂಗಿ ಹೋರಾಟ ನಡೆಸಿದರು. ಅವರು 77 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್‌ ಸಹಿತ 94 ರನ್ ಸಿಡಿಸಿದರು. ಆ ಮೂಲಕ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು. ಆದರೆ, ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಸೋಲಿಗೆ ಕಾರಣ ಎಂದು ನಾಯಕಿ ಬೇಸರ ವ್ಯಕ್ತಪಡಿಸಿದರು.

ADVERTISEMENT

ಪಂದ್ಯದ ಬಳಿಕ ಮಾತನಾಡಿದ ಹರ್ಮನ್‌ಪ್ರೀತ್ ಕೌರ್, ‘ನಮ್ಮ ಟಾಪ್-ಆರ್ಡರ್ ಜವಾಬ್ದಾರಿ ತೆಗೆದುಕೊಂಡಿಲ್ಲ. ನಾವು ಹಲವು ವಿಚಾರಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೆ, ಇನ್ನೂ ಹೆಚ್ಚಿನ ರನ್ ಕಲೆಹಾಕಬಹುದಿತ್ತು. ಇಂದಿನ ಪಂದ್ಯದಿಂದ ಕಲಿಯುವುದು ಬಹಳಷ್ಟಿದೆ‘ ಎಂದರು.

ರಿಚಾ ಘೋಷ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಅವರ ಆಟವನ್ನು ನೋಡಿ ನಾವು ಖುಷಿ ಪಟ್ಟಿದ್ದೇವೆ. ಅವರಿಗೆ ಇನ್ನೂ ಹೆಚ್ಚು ರನ್ ಗಳಿಸುವ ಸಾಮರ್ಥ್ಯವಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.