ADVERTISEMENT

ಇಂಡಿಯನ್ ಓಪನ್ ಸರ್ಫಿಂಗ್: ಫೈನಲ್‌ಗೆ ಇಶಿತಾ, ಸಿಂಚನಾ

​ಪ್ರಜಾವಾಣಿ ವಾರ್ತೆ
Published 28 ಮೇ 2022, 17:24 IST
Last Updated 28 ಮೇ 2022, 17:24 IST
ಸೃಷ್ಟಿ ಸೆಲ್ವಂ ಅವರು ಅಲೆಗಳನ್ನು ಎದುರಿಸಿ ಮುನ್ನುಗ್ಗಿದ ನೋಟ –ಪ್ರಜಾವಾಣಿ ಚಿತ್ರ
ಸೃಷ್ಟಿ ಸೆಲ್ವಂ ಅವರು ಅಲೆಗಳನ್ನು ಎದುರಿಸಿ ಮುನ್ನುಗ್ಗಿದ ನೋಟ –ಪ್ರಜಾವಾಣಿ ಚಿತ್ರ   

ಮಂಗಳೂರು: ಆತಿಥೇಯ ಕರ್ನಾಟಕದ ಇಶಿತಾ ಮಾಳವಿಯಾ ಹಾಗೂ ಸಿಂಚನಾ ಗೌಡ, ಇಲ್ಲಿನ ಪಣಂಬೂರು ಬೀಚ್‌ನಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ಆವೃತ್ತಿಯ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ.

ಗೋವಾದ ಶುಗರ್ ಬನಾರ್ಸೆ ಹಾಗೂತಮಿಳುನಾಡಿನ ಸೃಷ್ಟಿ ಸೆಲ್ವಂ ಕೂಡ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ವಿಭಾಗದ ಮೊದಲ ಹೀಟ್ಸ್‌ನಲ್ಲಿಶ್ರೀಕಾಂತ್‌ ಡಿ, ಸತೀಶ್‌ ಸರವಣನ್‌, ಸೂರ್ಯ ಪಿ, ರುಬಾನ್‌ ವಿ ಹಾಗೂ ಎರಡನೇ ಹೀಟ್ಸ್‌ನಲ್ಲಿ ರಮೇಶ್‌ ಬೂದಿಹಾಳ, ಅಜೀಶ್‌ ಅಲಿ, ಸಂಜಯ ಕುಮಾರ್ ಎಸ್‌,ಮಣಿಕಂಠನ್‌ ಎಂ ಆಯ್ಕೆಯಾಗಿದ್ದಾರೆ.

‘ವಿಶ್ವ ಸರ್ಫ್ ಲೀಗ್‌ನಲ್ಲಿ ಸ್ಪರ್ಧಿ ಸುವ ಹುಮ್ಮಸ್ಸಿನಲ್ಲಿದ್ದೇನೆ’ ಎಂದು ಕೋವಳಂನ 22 ವರ್ಷದ ಸರ್ಫರ್ ರಮೇಶ್ ಬೂದಿಹಾಳ ಕನಸು ಹಂಚಿ ಕೊಂಡರು. ಭಾನುವಾರ ಪುರುಷರ ಸೆಮಿಫೈನಲ್‌ ಹಾಗೂ ಫೈನಲ್‌, ಬಾಲಕಿಯರ ಫೈನಲ್‌ ನಡೆಯಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.