ADVERTISEMENT

ಒಲಿಂಪಿಕ್ ಅರ್ಹತಾ ಸ್ಪರ್ಧೆಗೆ ಶ್ರೀಹರಿ ನಟರಾಜನ್

ಸರ್ಬಿಯಾಗೆ ತೆರಳಲು ಭಾರತದ ಈಜುಪಟುಗಳಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 16:14 IST
Last Updated 8 ಜೂನ್ 2021, 16:14 IST
ಶ್ರೀಹರಿ ನಟರಾಜ್
ಶ್ರೀಹರಿ ನಟರಾಜ್   

ಅಹಮದಾಬಾದ್/ಬೆಂಗಳೂರು: ಕರ್ನಾಟಕದ ಶ್ರೀಹರಿ ನಟರಾಜ್ ಸೇರಿದಂತೆ ಭಾರತದ ಮೂವರು ಈಜುಪಟುಗಳಿಗೆ ಸರ್ಬಿಯಾದ ಬೆಲ್‌ಗ್ರೇಡ್ ಟ್ರೋಫಿ ಮತ್ತು ಇಟಲಿಯಲ್ಲಿ ನಡೆಯಲಿರು ಸೆಟ್ಟಿ ಕೊಲಿ ಟ್ರೋಫಿ ಒಲಿಂಪಿಕ್ ಅರ್ಹತಾ ಟೂರ್ನಿಗೆ ತೆರಳಲು ಅನುಮತಿ ನೀಡಲಾಗಿದೆ.

ಫಿನಾದಿಂದ ಮಾನ್ಯತೆ ಪಡೆದಿರುವ ಈ ಅರ್ಹತಾ ಸ್ಪರ್ಧೆಯು ಇದೇ 19 ಮತ್ತು 20ರಂದು ನಡೆಯಲಿದೆ. ಶ್ರೀಹರಿ ನಟರಾಜ್, ದುಬೈನಲ್ಲಿ ತರಬೇತಿ ಪಡೆಯುತ್ತಿರುವ ಸಾಜನ್ ಪ್ರಕಾಶ್ ಮತ್ತು ಮಾನಾ ಪಟೇಲ್ ಅವರಿಗೆ ಅವಕಾಶ ನೀಡಲಾಗಿದೆ.

ಇವರಲ್ಲದೇ ತಂಡದಲ್ಲಿ ಬೇರೆ ಬೇರೆ ಈಜು ವಿಭಾಗಗಳ ಸ್ಪರ್ಧಿಗಳನ್ನೂ ಸೇರ್ಪಡೆ ಮಾಡಲಾಗಿದೆ. ಬೆಲ್‌ಗ್ರೇಡ್ ಮತ್ತು ಇಟಲಿಯ ರೋಮ್‌ನಲ್ಲಿ ನಡೆಯುವ ಈಜು ಸ್ಪರ್ಧೆಗಳಲ್ಲಿ ಅವರು ಸ್ಪರ್ಧಿಸಲಿದ್ದಾರೆ.

ADVERTISEMENT

ತಂಡಗಳು ಇಂತಿವೆ

ಬೆಲ್‌ಗ್ರೇಡ್ ಟ್ರೋಫಿ: ಶ್ರೀಹರಿ ನಟರಾಜನ್ (50ಮೀ, 200 ಮೀ ಫ್ರೀಸ್ಟೈಲ್‌), ಸಾಜನ್ ಪ್ರಕಾಶ್ (100, 200 ಮೀ ಬಟರ್‌ಫ್ಲೈ, 200ಮೀ ಫ್ರೀಸ್ಟೈಲ್‌), ಮಾನಾ ಪಟೇಲ್ (100ಮೀ ಬ್ಯಾಕ್‌ಸ್ಟ್ರೋಕ್), ಕೆನಿಶಾ ಗುಪ್ತಾ (50ಮೀ, 100ಮೀ ಫ್ರೀಸ್ಟೈಲ್‌), ತನೀಶ್ ಮ್ಯಾಥ್ಯೂ (100ಮೀ, 200ಮೀ ಬಟರ್‌ಫ್ಲೈ, 200 ಫ್ರೀಸ್ಟೈಲ್), ಆರ್ಯನ್ ನೆಹ್ರಾ (200ಮೀ, 400 ಮೀ, 1500 ಮೀಫ್ರೀಸ್ಟೈಲ್), ಶಾನ್ ಗಂಗೂಲಿ (200ಮೀ, 400ಮೀ ವೈಯಕ್ತಿಕ ಮೆಡ್ಲೆ, 100, 200ಮೀ ಬಟರ್‌ಫ್ಲೈ).

ರೋಮ್ ಸೆಟ್ಟಿ ಕೊಲಿ ಟ್ರೋಫಿ: ಶ್ರೀಹರಿ ನಟರಾಜನ್ (50ಮೀ, 100ಮೀ ಬ್ಯಾಕ್‌ಸ್ಟ್ರೋಕ್), ಸಾಜನ್ ಪ್ರಕಾಶ್ (100, 200ಮೀ ಬಟರ್‌ಫ್ಲೈ, 200 ಮೀ ಫ್ರೀಸ್ಟೈಲ್‌), ಮಾನಾ ಪಟೇಲ್ (100 ಮೀ ಬ್ಯಾಕ್‌ಸ್ಟ್ರೋಕ್), ಕೆನಿಶಾ ಗುಪ್ತಾ (50 ಮೀ, 100ಮೀ ಫ್ರೀಸ್ಟೈಲ್‌), ತನೀಷ್ ಮ್ಯಾಥ್ಯೂ (200 ಮೀ ಫ್ರೀಸ್ಟೈಲ್, 200ಮೀ ಬಟರ್‌ಫ್ಲೈ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.