ADVERTISEMENT

ಭಾರತ–ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌: ರೋಹಿತ್ ಶರ್ಮಾ ದ್ವಿಶತಕ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 8:41 IST
Last Updated 20 ಅಕ್ಟೋಬರ್ 2019, 8:41 IST
ದ್ವಿ ಶತಕ ಗಳಿಸಿದ ರೋಹಿತ್‌ ಶರ್ಮಾ ಅಭಿಮಾನಿಗಳತ್ತ ಕೈ ಬೀಸಿದರು.
ದ್ವಿ ಶತಕ ಗಳಿಸಿದ ರೋಹಿತ್‌ ಶರ್ಮಾ ಅಭಿಮಾನಿಗಳತ್ತ ಕೈ ಬೀಸಿದರು.   

ರಾಂಚಿ: ‘ಮುಂಬೈಕರ್’ ರೋಹಿತ್ ಶರ್ಮಾ ಭಾನುವಾರದ ಪಂದ್ಯದಲ್ಲಿ ದ್ವಿಶತಕ ಗಳಿಸಿ, ಹೆಮ್ಮೆಯಿಂದ ಬೀಗಿದರು.

ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ 3ನೇ ಟೆಸ್ಟ್‌ನಲ್ಲಿ ರೋಹಿತ್‌ ದ್ವಿಶತಕದ ಸಂಭ್ರಮದೊಂದಿಗೆಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ರಾರಾಜಿಸಿದರು.

ರೋಹಿತ್‌ಆಟಕ್ಕೆ ಮುಂಬೈಕರ್ ಅಜಿಂಕ್ಯ ರಹಾನೆ ಕೂಡ ಜತೆ ನೀಡಿದರು. ರೋಹಿತ್‌ ದ್ವಿಶತಕ ಗಳಿಸುವ ಮೊದಲು ಅಜಿಂಕ್ಯ ಶತಕ ಪೂರೈಸಿ ಸಂಭ್ರಮಿಸಿದರು.

ADVERTISEMENT

ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು ರೋಹಿತ್‌ ಅವರ ಆರನೇ ಶತಕ. 30ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅವರು ಒಟ್ಟು ಎರಡು ಸಾವಿರ ರನ್‌ಗಳನ್ನು ಸೇರಿಸಿದ್ದಾರೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.