ADVERTISEMENT

‘5000 ರನ್‌ ಗಳಿಸಿದ ಆಟಗಾರರ ನಿಷೇಧಿಸಿ’

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 19:31 IST
Last Updated 15 ಅಕ್ಟೋಬರ್ 2020, 19:31 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಬೆಂಗಳೂರು:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅವರು ಐಪಿಎಲ್‌ನಲ್ಲಿ ಐದು ಸಾವಿರಕ್ಕೂ ಹೆಚ್ಚು ರನ್‌ ಕಲೆಹಾಕಿದ್ದಾರೆ. ಅವರನ್ನು ಟೂರ್ನಿಯಿಂದ ನಿಷೇಧಿಸಿದರೆ ಉಳಿದವರಿಗೆ ಸಾಧನೆ ಮಾಡಲು ಅವಕಾಶ ಸಿಗುತ್ತದೆ ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಚಟಾಕಿ ಹಾರಿಸಿದ್ದಾರೆ.

ಬುಧವಾರ ರಾತ್ರಿ ನಡೆದ ಇನ್ಸ್ಠಾಗ್ರಾಮ್ ಸಂವಾದದಲ್ಲಿ, ‘ಐಪಿಎಲ್‌ನಲ್ಲಿ ಹೊಸ ನಿಯಮಗಳೆನಾದರೂ ಬರಬೇಕೆಂದು ಅಪೇಕ್ಷಿಸುತ್ತೀರಾ’ ಎಂಬ ಪ್ರಶ್ನೆಗೆ ರಾಹುಲ್ ತಮಾಷೆಯಾಗಿ ಪ್ರತಿಕ್ರಿಯಿಸಿದರು.

‘ಚುಟುಕು ಮಾದರಿ ಮತ್ತು ಐಪಿಎಲ್‌ನಲ್ಲಿ ಐದು ಸಾವಿರ ರನ್ ಪೂರೈಸಿರುವ ವಿರಾಟ್ ಕೊಹ್ಲಿ ಮತ್ತು ಎಬಿಡಿ ಅವರನ್ನು ಕೆಲವು ವರ್ಷಗಳ ಮಟ್ಟಿಗಾದರೂ ಆಡದಂತೆ ನಿಷೇಧಿಸಬೇಕು. ಅವರಿಬ್ಬರಿಗೂ ಅಷ್ಟೇ ಸಾಕೆನಿಸುತ್ತದೆ. ಉಳಿದವರಿಗೂ ಒಂದಿಷ್ಟು ಅವಕಾಶ ಸಿಗಲಿ’ ಎಂದರು. ಸಂವಾದದಲ್ಲಿ ಹಾಜರಿದ್ದ ಕೊಹ್ಲಿ ಕೂಡ ನಕ್ಕರು.

ADVERTISEMENT

ರಾಹುಲ್ ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಬಹಳಷ್ಟು ಜನರಿಂದ ಮೆಚ್ಚುಗೆ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.