ADVERTISEMENT

ಐಪಿಎಲ್–2020: ಫೀಲ್ಡರ್‌ಗೆ ಬೈದ ಪಂಜಾಬ್ ತಂಡದ ನಾಯಕ ರಾಹುಲ್

ಏಜೆನ್ಸೀಸ್
Published 22 ಸೆಪ್ಟೆಂಬರ್ 2020, 15:13 IST
Last Updated 22 ಸೆಪ್ಟೆಂಬರ್ 2020, 15:13 IST
ಕಿಂಗ್ಸ್‌ ಇಲವೆನ್‌ ಪಂಜಾಬ್ ತಂಡದ ನಾಯಕ ಕೆ.ಎಲ್‌.ರಾಹುಲ್‌
ಕಿಂಗ್ಸ್‌ ಇಲವೆನ್‌ ಪಂಜಾಬ್ ತಂಡದ ನಾಯಕ ಕೆ.ಎಲ್‌.ರಾಹುಲ್‌    
""
""

ಕಿಂಗ್ಸ್‌ ಇಲವೆನ್‌ ಪಂಜಾಬ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವೆ ಭಾನುವಾರ ನಡೆದ ಪಂದ್ಯ ರೋಚಕ ಅಂತ್ಯಕಂಡಿತ್ತು.ಎರಡೂ ತಂಡಗಳ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ವಿಕೆಟ್‌ಗಳನ್ನು ಒಪ್ಪಿಸಿದ್ದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಚೇತರಿಕೆಯ ಆಟವಾಡಿ ರನ್‌ ಗತಿ ಏರಿಸಿದ್ದರು. ಕೊನೆಯಲ್ಲಿ ಮತ್ತೆ ನಾಟಕೀಯ ತಿರುವುಗಳು ಕಂಡು ಬಂದವು. ಹೀಗಾಗಿ ಪಂದ್ಯ ಟೈ ಆಗಿತ್ತು.

ಡೆಲ್ಲಿ ಪಡೆ ಸೂಪರ್ ಓವರ್‌ನಲ್ಲಿ ಗೆಲುವಿನ ನಗೆ ಬೀರಿತ್ತು.

ಉಭಯ ತಂಡಗಳಆಟಗಾರರು ಸಾಕಷ್ಟು ಒತ್ತಡದಿಂದ ಆಡಿದ್ದರು. ಈ ವೇಳೆ ಕಿಂಗ್ಸ್‌ ಇಲವೆನ್‌ ತಂಡದ ನಾಯಕ ಕೆ.ಎಲ್‌.ರಾಹುಲ್‌ ಫೀಲ್ಡರ್‌ಗೆಬೈದಿರುವುದು ಸ್ಟಂಪ್‌ ಮೈಕ್‌ನಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ADVERTISEMENT

ರಾಹುಲ್ ಪೀಲ್ಡಿಂಗ್‌ನಲ್ಲಿ‌ ಬದಲಾವಣೆ ಮಾಡುವ ವೇಳೆ ಆಟಗಾರನಿಗೆ ಬೇಗನೆ ಮುಂದೆ ಬರುವಂತೆ ಹೇಳಲು ‘ಮುಂದೆ ಬಾರೊ ***’ ಎಂದು ಬೈದಿದ್ದಾರೆ. ಇದು ಮೈಕ್‌ನಲ್ಲಿ ರೆಕಾರ್ಡ್‌ ಆಗಿದೆ.ಪಂಜಾಬ್‌ ತಂಡದಲ್ಲಿ ಮಯಂಕ್‌ ಅಗರವಾಲ್‌, ಕರುಣ್‌ ನಾಯರ್‌, ಕೆ.ಗೌತಮ್ ಸೇರಿದಂತೆ ಕರ್ನಾಟಕದ ಕೆಲವು ಆಟಗಾರರು ಇದ್ದಾರೆ. ಅವರಲ್ಲೇ ಒಬ್ಬರಿಗೆ ಹಾಗೆ ಹೇಳಿರಬಹುದು ಎನ್ನಲಾಗಿದೆ.

ಇದು ವೈರಲ್‌ ಆಗುತ್ತಿದ್ದಂತೆ ರಾಹುಲ್‌ ಅವರನ್ನು ಟ್ರೋಲ್‌ ಮಾಡಲಾಗಿದೆ.

ರಾಹುಲ್‌ಪಂದ್ಯದ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವಕನ್ನಡದ ‘ಫ್ರೆಂಚ್‌ ಬಿರಿಯಾನಿ’ ಸಿನಿಮಾ ನಟ ಡ್ಯಾನಿಷ್‌ ಸೇಟ್,‘ಮುಂದೆ ಬಾ *** ಗೋಲ್ಡನ್‌ ವರ್ಡ್ಸ್ ಕೆಎಲ್‌. ಲವ್‌ ಯೂ’‌ ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು‘ಮುಂದೆ ಬಾ *** ಐಪಿಎಲ್-2020ರ ಟ್ಯಾಗ್‌ಲೈನ್ ಆಗಿರಬೇಕು’ ಎಂದು ಕಿಚಾಯಿಸಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 157 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಪಂಜಾಬ್‌ ಕನ್ನಡಿಗ ಮಯಂಕ್‌ (89) ಅತ್ಯುತ್ತಮ ಪ್ರದರ್ಶನದ ಬಲದಿಂದ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಹೀಗಾಗಿ ಸೂಪರ್‌ ಓವರ್‌ ಮೊರೆಹೋಗಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.