ADVERTISEMENT

IPL 2021: ರ‍್ಯಾಪ್ ಹಾಡಿಗೆ ಹೆಜ್ಜೆ ಹಾಕಿದ ಕ್ರಿಸ್ ಗೇಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಏಪ್ರಿಲ್ 2021, 11:17 IST
Last Updated 12 ಏಪ್ರಿಲ್ 2021, 11:17 IST
ಕ್ರಿಸ್ ಗೇಲ್
ಕ್ರಿಸ್ ಗೇಲ್   

ಮುಂಬೈ: ಯೂನಿವರ್ಸ್ ಬಾಸ್ ಖ್ಯಾತಿಯ ವೆಸ್ಟ್‌ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್, ಭಾರತೀಯ ಮೂಲದ ರ‍್ಯಾಪ್ ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸದಾ ಹೊಸತನದೊಂದಿಗೆ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುವ ಗೇಲ್, ಈಗ ರ‍್ಯಾಪ್ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಹೃದಯ ಗೆದ್ದಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಕಟ್ಟಿಕೊಂಡಿರುವ ಗೇಲ್, ಈ ಬಾರಿಯಟೂರ್ನಿಯಲ್ಲೂ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ADVERTISEMENT

ಜನಪ್ರಿಯ ರ‍್ಯಾಪರ್ ಎಮಿವೇ ಬಂಟೈ ಎಂಬವರ ಸಹಯೋಗದಲ್ಲಿ 'ಇಂಡಿಯಾ ಸೆ ಜಮೈಕಾ' ಎಂಬ ಹೊಸತಾದ ರ‍್ಯಾಪ್ ವಿಡಿಯೊದಲ್ಲಿ ಗೇಲ್, ತಮ್ಮ ನಟನಾ ಕೌಶಲ್ಯವನ್ನು ಮೆರೆದಿದ್ದಾರೆ.

ಇತ್ತೀಚೆಗಷ್ಟೇ ಕ್ವಾರಂಟೈನ್ ವಾಸ ಮುಕ್ತಾಯದ ಬಳಿಕ ಕ್ರಿಸ್ ಗೇಲ್, ಪಾಪ್ ದಿಗ್ಗಜ ಮೈಕಲ್ ಜಾಕ್ಸನ್ ಅವರ 'ಮೂನ್ ವಾಕ್' ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದರು.

ಅಂದ ಹಾಗೆ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ ರಾಯಲ್ಸ್ ಸವಾಲನ್ನು ಎದುರಿಸಲಿದೆ. ಗೇಲ್ ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿಯುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.