ADVERTISEMENT

IPL 2021: 4ನೇ ಬಾರಿ ಶೂನ್ಯದ ಸುರುಳಿ ಸುತ್ತಿದ ಕೋಟಿ ಗಳಿಕೆಯ ಆಟಗಾರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 16:18 IST
Last Updated 30 ಏಪ್ರಿಲ್ 2021, 16:18 IST
   

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ವೆಸ್ಟ್‌ಇಂಡೀಸ್ ಮೂಲದ ನಿಕೋಲಸ್ ಪೂರನ್ ಕೆಟ್ಟ ಫಾರ್ಮ್ ಮುಂದುವರಿದಿದೆ.

ಐಪಿಎಲ್‌ನಲ್ಲಿ ಕೋಟಿ ಕೋಟಿ ಸಂಪಾದನೆ ಪಡೆಯುತ್ತಿರುವ ನಿಕೋಲಸ್ ಪೂರನ್, ಪ್ರಸಕ್ತ ಋತುವಿನಲ್ಲಿ ನಾಲ್ಕನೇ ಬಾರಿಗೆ ಡಕ್ ಔಟ್ ಆಗಿದ್ದಾರೆ.

ಈ ಮೂಲಕ ಒಂದೇ ಆವತ್ತಿಯಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ದಾಖಲೆಯನ್ನು ಸರಿಗಟ್ಟುವ ಮೂಲಕ ಅಪಖ್ಯಾತಿಗೆ ಒಳಗಾಗಿದ್ದಾರೆ.

ADVERTISEMENT

2009ರಲ್ಲಿ ಹರ್ಷಲ್ ಗಿಬ್ಸ್, 2011 ಮಿಥುನ್ ಮನ್ಹಾಸ್, 2012ರಲ್ಲಿ ಮನೀಷ್ ಪಾಂಡೆ, 2020ರಲ್ಲಿ ಶಿಖರ್ ಧವನ್ ಅತಿ ಹೆಚ್ಚು ನಾಲ್ಕು ಬಾರಿ ಡಕ್ ಔಟ್ ಆಗಿದ್ದರು. ಈ ದಾಖಲೆಯನ್ನೀಗ ಪೂರನ್ ಸರಿಗಟ್ಟಿದ್ದಾರೆ.

ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಬಳಿಕವೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪೂರನ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. ಮೂರು ಎಸೆತಗಳನ್ನು ಎದುರಿಸಿದ ಪೂರನ್, ಕೈಲ್ ಜೇಮಿಸನ್ ದಾಳಿಯಲ್ಲಿ ಶಹಬಾಜ್ ಅಹಮ್ಮದ್‌ಗೆ ಕ್ಯಾಚಿತ್ತು ಮರಳಿದರು.

ಏತನ್ಮಧ್ಯೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ನಿಕೋಲಸ್ ಪೂರಸ್, ಹಣಕಾಸಿನ ನೆರವು ಘೋಷಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಮೂಲಕ ಬ್ಯಾಟಿಂಗ್‌ನಲ್ಲೂ ವೈಫಲ್ಯ ಅನುಭವಿಸಿದರೂ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಐಪಿಎಲ್ 2021ರಲ್ಲಿ ನಿಕೋಲಸ್ ಪೂರನ್ ಬ್ಯಾಟಿಂಗ್ ಕಾರ್ಡ್ ಇಂತಿದೆ:
ರಾಜಸ್ಥಾನ್ ವಿರುದ್ಧ 0(1)
ಚೆನ್ನೈ ವಿರುದ್ಧ 0(2)
ಡೆಲ್ಲಿ ವಿರುದ್ಧ 9(8)
ಹೈದರಾಬಾದ್ ವಿರುದ್ಧ 0(0)
ಕೆಕೆಆರ್ ವಿರುದ್ಧ 19(19)
ಆರ್‌ಸಿಬಿ ವಿರುದ್ಧ 0(3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.