ADVERTISEMENT

IPL 2021: ಸಂಜು ಕ್ಯಾಚ್-ಪರಾಗ್ ರನೌಟ್ ಮೋಡಿ; ನಾಯಕರಾಗಿ ಪಂತ್ ಮೊದಲ ಫಿಫ್ಟಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 16:01 IST
Last Updated 15 ಏಪ್ರಿಲ್ 2021, 16:01 IST
   

ಮುಂಬೈ: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿಕೆಟ್ ಕೀಪರ್ ನಾಯಕ ಸಂಜು ಸ್ಯಾಮ್ಸನ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.

ಅದೇ ಹೊತ್ತಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಲ್‌ರೌಂಡರ್ ರಿಯಾನ್ ಪರಾಗ್ ಅಮೋಘ ರನೌಟ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ನಾಯಕರಾಗಿ ಮೊದಲ ಅರ್ಧಶತಕ ಸಾಧನೆ ಮಾಡಿದ್ದಾರೆ.

ಸಂಜು ಕ್ಯಾಚ್ ಮೋಡಿ...
ಜೈದೇವ್ ಉನಾದ್ಕಟ್ ದಾಳಿಯಲ್ಲಿ ಶಿಖರ್ ಧವನ್ ಅವರು ಸ್ಕೂಪ್ ಮಾಡಲು ಯತ್ನಿಸಿದ ಚೆಂಡನ್ನು ಸಂಜು ತಮ್ಮ ಕೈಯೊಳಗೆ ಭದ್ರವಾಗಿ ಸೇರಿಸಿದರು. ಈ ಮೂಲಕ ಕಳೆದ ಪಂದ್ಯದ ಹೀರೂ ಧವನ್ 9 ರನ್ ಗಳಿಸಿ ವಿಕೆಟ್ ಒಪ್ಪಿಸಬೇಕಾಯಿತು.

ADVERTISEMENT

ತಮ್ಮ ಬಲ ಬದಿಯತ್ತ ಡೈವ್ ಹೊಡೆದ ಸಂಜು, ತಮ್ಮ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು.

ಪರಾಗ್ ನೇರ ಥ್ರೋ, ಪಂತ್ ರನೌಟ್...
ಅತ್ತ 30 ಎಸೆತಗಳಲ್ಲೇ ಅರ್ಧಶತಕ ಬಾರಿಸಿ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ರಿಷಭ್ ಪಂತ್ ಅವರನ್ನು ರಿಯಾನ್ ಪರಾಗ್ ನೇರ ಥ್ರೋ ಮಾಡುವ ಮೂಲಕ ರನೌಟ್ ಮಾಡಿದರು.

ತಮ್ಮದೇ ದಾಳಿಯಲ್ಲಿ ಒಂಟಿ ರನ್ ಕದಿಯಲು ಯತ್ನಿಸಿದ ಪಂತ್ ಅವರನ್ನು ಚುರುಕಿನ ಫೀಲ್ಡಿಂಗ್ ಮೂಲಕ ಪರಾಗ್ ರನೌಟ್ ಮಾಡಿದರು. 32 ಎಸೆತಗಳನ್ನು ಎದುರಿಸಿದ ಪಂತ್ ಒಂಬತ್ತು ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿದರು.

ಪಂತ್ ಅವರನ್ನು ರನೌಟ್ ಮಾಡುವ ಮೂಲಕ ರಿಯಾನ್ ಪರಾಗ್, ಅಸ್ಸಾಂನ ಸಾಂಪ್ರದಾಯಿಕ ಶೈಲಿಯಲ್ಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಈ ವಿಡಿಯೊವನ್ನು ಐಪಿಎಲ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ.

ಸಂಜು ಕ್ಯಾಚ್...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.