ADVERTISEMENT

IPL 2022: ಟೈಫಾಯ್ಡ್ ಜ್ವರದಿಂದ ಪೃಥ್ವಿ ಶಾ ಗುಣಮುಖ; ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಮೇ 2022, 10:37 IST
Last Updated 15 ಮೇ 2022, 10:37 IST
ಪೃಥ್ವಿ ಶಾ
ಪೃಥ್ವಿ ಶಾ   

ಮುಂಬೈ:ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಟೈಫಾಯ್ಡ್ ಜ್ವರದಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಫ್ರಾಂಚೈಸ್ ಭಾನುವಾರ ಖಚಿತಪಡಿಸಿದೆ.

ಪೃಥ್ವಿ ಶಾ ಅವರು ಟೈಫಾಯ್ಡ್ ಜ್ವರದಿಂದ ಬಳಲಿದ್ದರು ಎಂದು ಡೆಲ್ಲಿ ಫ್ರಾಂಚೈಸ್ ಪ್ರಕಟಣೆ ತಿಳಿಸಿದೆ. ಅವರೀಗ ತಂಡದ ಹೋಟೆಲ್‌ಗೆ ಮರಳಿದ್ದು, ವೈದ್ಯಕೀಯ ತಂಡವು ನಿಗಾ ವಹಿಸುತ್ತಿದೆ.

ಐಪಿಎಲ್ 2022 ಟೂರ್ನಿಯಲ್ಲಿ ಮೇ 1ರಂದು ಪೃಥ್ವಿ ಶಾ ಡೆಲ್ಲಿ ಪರ ಕೊನೆಯ ಪಂದ್ಯ ಆಡಿದ್ದರು. ಬಳಿಕ ತೀವ್ರ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದಾಗಿ ಮೂರು ಪಂದ್ಯಗಳಿಗೆ ಲಭ್ಯವಾಗಿರಲಿಲ್ಲ.

ಲೀಗ್ ಹಂತದ ಉಳಿದಿರುವ ಎರಡು ಪಂದ್ಯಗಳಿಗೆ ಪೃಥ್ವಿ ಲಭ್ಯರಾಗುವುದು ಅನುಮಾನವೆನಿಸಿದೆ. ಪ್ಲೇ-ಆಫ್ ಪ್ರವೇಶ ಎದುರು ನೋಡುತ್ತಿರುವ ಡೆಲ್ಲಿ ಮೇ 16ರಂದು ಪಂಜಾಬ್ ಕಿಂಗ್ಸ್ ಹಾಗೂ ಮೇ 21ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಈ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.